ಹೈದ್ರಾಬಾದ್ : ಮಾಧ್ಯಮ ದಿಗ್ಗಜ ರಾಮೋಜಿ ರಾವ್ (88) ಇಂದು ನಿಧನರಾಗಿದ್ದಾರೆ. ಹೈದರಾಬಾದ್ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮುಂಜಾನೆ 4-50 ರ ಸುಮಾರಿಗೆ ನಿಧನ ಹೊಂದಿದ್ದಾರೆ.

ಅತಿ ದೊಡ್ಡ ರಾಮೋಜಿ ಫಿಲ್ಮ ಸಿಟಿ ಸೇರಿದಂತೆ ರಾಮೋಜಿ ಸಮೂಹ ಸಂಸ್ಥೆಗಳ ಒಡೆತನದಿಂದ ಅವರು ಮನೋರಂಜನಾ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದರು. ಇತ್ತೀಚಿಗಷ್ಟೇ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಸ್ಟೆಂಟ್ ಅಳವಡಿಕೆ ಮಾಡಲಾಗಿತ್ತು.

ನ್ಯೂಸ್ ಟುಡೆ, ಈಟಿವಿ ಸೇರಿದಂತೆ ಜನರಲ್ ಎಂಟರ್‌ಟೈನ್‌ಮೆಂಟ್ ಮತ್ತು ನ್ಯೂಸ್ ಚಾನೆಲ್‌ಗಳು, , ಉಷಾ ಕಿರಣ್ ಮೂವೀಸ್ – ಫಿಲ್ಮ್ ಪ್ರೊಡಕ್ಷನ್ ಹೌಸ್, ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ – ಫಿಲ್ಮ್ ಡಿಸ್ಟ್ರಿಬ್ಯೂಷನ್ ಎಂಟರ್‌ಪ್ರೈಸ್, ಜೊತೆಗೆ, ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್ಸ್, ಕಲಾಂಜಲಿ ಸಿಕ್ಸ್ – ಸೀರೆ ಮಳಿಗೆಗಳು, ಕಲಾಂಜಲಿ ಶಾಪಿಂಗ್ ಮಾಲ್‌ಗಳು, ಮಾರ್ಗದರ್ಶಿ ಚಿಟ್ ಫಂಡ್‌ಗಳು – ಖಾಸಗಿ ಹಣಕಾಸು ಸಂಸ್ಥೆ ಮತ್ತು ಪ್ರಿಯಾ ಪಿಕಲ್ಸ್ ಅವರ ಕೆಲವು ಯಶಸ್ವಿ ಉದ್ಯಮಗಳಾಗಿದ್ದವು.

ಸಿನೆಮಾ ರಂಗದ ಗಣ್ಯರೂ ಸೇರಿದಂತೆ, ರಾಜಕಾರಣಿಗಳು, ಸೆಲೆಬ್ರಿಟಿಗಳು ಇಂದು ರಾಮೋಜಿ ರಾವ್ ಅವರ ಅಂತಿಮ ದರ್ಶನ ಪಡೆಯಲಿದ್ದಾರೆ. ರಾಮೋಜಿ ರಾವ್ ನಿಧಾನಕ್ಕೆ ಮಾಧ್ಯಮ ಲೋಕಕ್ಕೆ ಬಾರೀ ನಷ್ಟ ಉಂಟಾಗಿದೆ.