ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಭಟ್ಕಳ(Bhatkal) : ಉತ್ತರ ಕನ್ನಡ(Uttarkannada) ಜಿಲ್ಲೆಯ ಭಟ್ಕಳ ತಾಲೂಕಿನ ಬೇರೊಂದು ಅಮೆರಿಕದಲ್ಲಿ(America) ಗಮನ ಸೆಳೆದಿದೆ. ಐತಿಹಾಸಿಕ ಸಾಧನೆ ಮಾಡುವ ಮೂಲಕ ವ್ಯಕ್ತಿಯೊಬ್ಬರು ರಾಜಕೀಯ ಇತಿಹಾಸದಲ್ಲಿ(Political History) ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಮಾಜಿ ಉಪ ಸಚಿವ ಭಟ್ಕಳದ ದಿವಂಗತ ಜೆ.ಎಚ್. ಶಮ್ಯುದ್ದೀನ್ ಜುಕಾಕು(Former deputy Minister blate J H Shamsuddin Jukako) ಅವರ ಮೊಮ್ಮಗಳ ಪತಿ (ಅಳಿಯ) ಡಾ. ಅಬ್ದುಲ್ ಎಲ್-ಸಯ್ಯದ್ ಅವರು ಅಮೆರಿಕದ ಸೆನೆಟ್(America Senate) ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ.
ಮಿಚಿಗನ್ ಸೆನೆಟ್(Michigun Senate) ಕ್ಷೇತ್ರದಲ್ಲಿ ರಿಪಬ್ಲಿಕನ್ ಪಕ್ಷದ(Republican Party) ಪ್ರಬಲ ಅಭ್ಯರ್ಥಿ ಮೈಕ್ ರೋಜರ್ಸ್ ಅವರನ್ನು ಪರಾಭವಗೊಳಿಸಿರುವ ಡಾ. ಅಬ್ದುಲ್ ಎಲ್-ಸಯ್ಯದ್(Dr. Abdul Syed), ಅಮೆರಿಕದ ಸೆನೆಟ್ಗೆ ಆಯ್ಕೆಯಾದ ಪ್ರಥಮ ಮುಸ್ಲಿಂ ನಾಯಕ ಎಂದೆನಿಸಿಕೊಂಡಿದ್ದಾರೆ.
ನವೆಂಬರ್ 4ರಂದು ಅಸೋಸಿಯೇಟೆಡ್ ಪ್ರೆಸ್ (Associated Press) ಈ ಐತಿಹಾಸಿಕ ಫಲಿತಾಂಶವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.
ಮಾಜಿ ಸಾರ್ವಜನಿಕ ಆರೋಗ್ಯ ಅಧಿಕಾರಿಯಾಗಿರುವ (Former Public Health Officer) ಅಬ್ದುಲ್ ಎಲ್ – ಸಯ್ಯದ್ ಸಾರ್ವಜನಿಕರಿಗೆ ಸುಲಭ ಹಾಗೂ ತ್ವರಿತ ಆರೋಗ್ಯ ಸೇವೆ, ಕುಟುಂಬಗಳ ಮೇಲಿನ ಜೀವನ ವೆಚ್ಚ ಇಳಿಕೆ ಹಾಗೂ ರಾಜಕೀಯದಲ್ಲಿ ಕಾರ್ಪೊರೇಟ್ ಸಂಸ್ಥೆಗಳ ಹಣಕಾಸಿನ ಪ್ರಭಾವವನ್ನು ನಿಯಂತ್ರಿಸುವ ಪ್ರಮುಖ ವಿಚಾರಗಳನ್ನ ಮತದಾರರ ಮುಂದಿಡುವ ಮೂಲಕ ಮತದಾರ ಪ್ರಭುಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಅಬ್ದುಲ್ ಎಲ್ – ಸಯ್ಯದ್ ಅವರ ಪತ್ನಿ ಡಾ. ಸಾರಾ ಜುಕಾಕು ಅವರ ತಾತ ದಿವಂಗತ ಜೆ.ಎಚ್. ಶಮ್ಸುದ್ದೀನ್ ಜುಕಾಕು ಅವರು ಭಟ್ಕಳದ ಅಭಿವೃದ್ಧಿಯ ಹರಿಕಾರರಾಗಿದ್ದವರು. 1946ರಲ್ಲಿ ಬಾಂಬೆ ವಿಧಾನಸಭೆಗೆ (Bombay Assembly) ಆಯ್ಕೆಯಾಗಿದ್ದ ಶಮ್ಸುದ್ದೀನ್ ಅವರು ರಾಜ್ಯಗಳ ಪುನರ್ವಿಂಗಡಣೆಯ ನಂತರ 1957 ಮತ್ತು 1962 ರಲ್ಲಿ ಹೊನ್ನಾವರ – ಭಟ್ಕಳ(Honnavar Bhatkal) ಕ್ಷೇತ್ರದಿಂದ ಮೈಸೂರು ವಿಧಾನಸಭೆಗೆ (Mysore Assembly) ಆಯ್ಕೆಯಾಗಿ ಸೇವೆ ಸಲ್ಲಿಸಿದ್ದರು.
ಅಂದಿನ ಮುಖ್ಯಮಂತ್ರಿ ಬಿ.ಡಿ. ಜತ್ತಿ(CM B D Jatti) ಅವರ ಸಂಪುಟದಲ್ಲಿ ಉಪ ಹಣಕಾಸು ಸಚಿವರಾಗಿ (Deputy Finance Minister) ಹಾಗೂ ಎಸ್. ನಿಜಲಿಂಗಪ್ಪ(S Nijalingappa) ಅವರ ಆಡಳಿತಾವಧಿಯಲ್ಲಿ ವಿದ್ಯುತ್ ಇಲಾಖೆಯ ಉಪ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1954ರಿಂದ 1958ರವರೆಗೆ ಭಟ್ಕಳ ಪುರಸಭೆ(Bhatkal TMC) ಅಧ್ಯಕ್ಷರಾಗಿ ತೀವೃ ಹಿಂದುಳಿದ ತಾಲೂಕಿನಲ್ಲಿ ರಸ್ತೆ, ಒಳಚರಂಡಿ, ವಿದ್ಯುತ್ ಹಾಗೂ ದೂರವಾಣಿ ಸಂಪರ್ಕದಂತಹ ಮೂಲಸೌಕರ್ಯಗಳಿಗೆ ಭದ್ರ ಬುನಾದಿ ಹಾಕಿದ್ದರು. ಅವರ ಸ್ಮರಣಾರ್ಥ ಭಟ್ಕಳದ ಪ್ರತಿಷ್ಠಿತ ‘ಅಂಜುಮನ್ ಹಾಮಿ-ಎ-ಮುಸ್ಲಿಮೀನ್’ ಶಿಕ್ಷಣ ಸಂಸ್ಥೆಯ ಆಡಳಿತ ಭವನಕ್ಕೆ ಅವರ ಹೆಸರಿದೆ.
ಮೈಸೂರು ರಾಜ್ಯದ (Mysore State) ಸಚಿವ ಸಂಪುಟದಲ್ಲಿ ಭಟ್ಕಳದ ಧ್ವನಿಯಾಗಿದ್ದ ಶಮ್ಸುದ್ದೀನ್ ಕುಟುಂಬದ ಕುಡಿ, ಇಂದು ಅಮೆರಿಕದ ಸೆನೆಟ್ನ ಮಹತ್ವದ ಚುನಾವಣೆಯಲ್ಲಿ ವಿಜಯ ಪತಾಕೆ ಹಾರಿಸಿರುವುದು ಇಡೀ ಕರ್ನಾಟಕ (Karnataka) ಮಾತ್ರವಲ್ಲದೆ ಕರಾವಳಿ ಭಾಗದಲ್ಲಿ ಖುಷಿಯ ವಾತಾವರಣ ನಿರ್ಮಾಣ ಮಾಡಿದೆ.