ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಗೋಕರ್ಣ(Gokarn) : ಶ್ರೀಕ್ಷೇತ್ರಗೋಕರ್ಣದಲ್ಲಿ ಆತ್ಮಲಿಂಗದ(Gokarn Aatmalinga) ದರ್ಶನ ಪಡೆದು ಹೊರಬಂದ ವ್ಯಕ್ತಿಯೋರ್ವರು ಹೃದಯಾಘಾತದಿಂದ(Heart Attack) ಶಿವನ ಪಾದ ಸೇರಿದ ಘಟನೆ ಭಾನುವಾರ ನಡೆದಿದೆ.
ನಾರ್ತ್ ಗೋವಾ ನಿವಾಸಿ(North Goa) ರತ್ನಾಕರ ಬೋರ್ಕರ್ (72) ಮೃತ ದುರ್ದೈವಿ. ಭಾನುವಾರ ಬೆಳಿಗ್ಗೆ ಶಿವರಾತ್ರಿಯ ಈಶ್ವರನ ದರ್ಶನ(Lord Shiva Darshan) ಪಡೆಯಲು ರತ್ನಾಕರ ಅವರು ಗೋಕರ್ಣಕ್ಕೆ(Gokarn) ಬಂದಿದ್ದರು. ಗಣ್ಯ ವ್ಯಕ್ತಿಗಳ ಸಾಲಿನಲ್ಲಿ ತೆರಳಿ ದೇವರ ಆತ್ಮಲಿಂಗದ ದರ್ಶನ ಪಡೆದಿದ್ದರು. ಬಳಿಕ ದೇವಾಲಯ ಹೊರಾಂಗಣದಲ್ಲಿ ಪ್ರಸಾದ ರೂಪದ ರುದ್ರಾಕ್ಷಿಯನ್ನ(Rudrakshi) ಸ್ವೀಕರಿಸಿದ್ದರು. ನಂತರ ಅವರು ಹೃದಯಾಘಾತಕ್ಕೆ ಒಳಗಾಗಿದ್ದರು.
ತಕ್ಷಣ ಕರ್ತವ್ಯದಲ್ಲಿದ್ದ ಪೊಲೀಸರು , ಸಿಪಿಐ ಶ್ರೀಧರ ಅವರು ಸಿಪಿಆರ್ ಜೊತೆಗೆ ವೈದ್ಯ ಸಿಬ್ಬಂದಿಗಳಿಂದ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ತಕ್ಷಣವೇ ತಮ್ಮವಾಹನದಲ್ಲಿ ಗೋಕರ್ಣ ಸರ್ಕಾರಿ ಆಸ್ಪತ್ರೆಗೆ(Gokarn Government Hospital) ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ರತ್ನಾಕರ್ ಅವರಿಗೆ ಈ ಹಿಂದೆ ಬೈಪಾಸ್ ಸರ್ಜರಿ ಕೂಡ ಆಗಿತ್ತು ಎಂದು ಕುಟುಂಬ ಮೂಲಗಳು ತಿಳಿಸಿವೆ. ಶಿವರಾತ್ರಿಯ ದಿನದಂದೇ ಶಿವನ ಸನ್ನಿಧಿಯಲ್ಲಿಯೇ ಅವರು ಮೃತಪಟ್ಟಿರುವುದು ಅವರ ಪುಣ್ಯ ಎಂದು ಭಕ್ತರು ಆಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ(Gokarn Police Station) ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಉತ್ತರಕನ್ನಡ ಜಿಲ್ಲೆಯಲ್ಲಿ ಏಲ್ಲೆಲ್ಲಿಯೂ ಶಿವಮಯ. ಭಕ್ತರಿಗೆ ಅತ್ಯುತ್ತಮ ವ್ಯವಸ್ಥೆ.
ಅಮದಳ್ಳಿ ಬಳಿ ಬೈಕ್ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿ. ಸ್ಕೂಟಿ ಸವಾರ ಗಂಭೀರ.
