ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ದಾಂಡೇಲಿ(Dandeli) : ನಗರದ ಹಳಿಯಾಳ ರಸ್ತೆಯ(Haliyal Road) 3ನಂ ಗೇಟ್ ಹತ್ತಿರದ ಮನೆಯೆಂದರ ಮೇಲ್ಚಾವಣಿಯ ಮೇಲೆ ವೃದ್ಧೆಯೊಬ್ಬರೂ ನೇಣಿಗೆ ಶರಣಾದ ಘಟನೆ ನಡೆದಿದೆ.
ಶಾಂತವ್ವಾ ಚಂದ್ರಪ್ಪ ಕಿಳ್ಳೀಕೇತರ (69) ನೇಣಿಗೆ ಶರಣಾದ ವೃದ್ಧೆ. ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ನೇಣಿಗೆ ಶರಣಾಗುವ ಸಂದರ್ಭದಲ್ಲಿ ಆ ಮನೆಯಲ್ಲಿ ಯಾರು ಇರಲಿಲ್ಲವೇ?, ಮನೆಯಲ್ಲಿದ್ದವರಿಗೆ ಯಾರಿಗೂ ಗೊತ್ತಾಗಲಿಲ್ಲವೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಸ್ಥಳಕ್ಕೆ ಪಿಎಸ್ಐ ಅಮೀನ್ ಅತ್ತಾರ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ(Police Investigation) ನಡೆಸುತ್ತಿದ್ದಾರೆ.
