ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮುರ್ಡೇಶ್ವರ(Murdeshwar) : ಇಲ್ಲಿನ ಮಾತೋಬಾರ ದೇವಸ್ಥಾನದ ಸಮೀಪದ ಬೀಚ್ ಪ್ರದೇಶದಲ್ಲಿ(Beach Area) ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ ಅನುಮಾನದಲ್ಲಿ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕನಕಪುರ(Ksnakapura) ಮೇನ್ ರೋಡ್ ನಿವಾಸಿ ಸತೀಶ ಸೆಲ್ವರಾಜ್(21), ಮೋನಿಶ್ ಬಾಬು ಭಾಸ್ಕರ ರೆಡ್ಡಿ(18) ಎಂದು ತಿಳಿದುಬಂದಿದೆ. ಶುಕ್ರವಾರ ಸಂಜೆ ಸುಮಾರಿಗೆ ಇಲ್ಲಿನ ಮಾತೋಬಾರ ದೇವಸ್ಥಾನದ ಹತ್ತಿರದ ಬೀಚ್ ಪ್ರದೇಶದಲ್ಲಿ ಗಾಂಜಾ(Marijuana) ಮಾದಕ ವಸ್ತು ಸೇವನೆ ಮಾಡುತ್ತಿರುವ ಅನುಮಾನದಲ್ಲಿ ಪಿಎಸ್‌ಐ ಹಣಮಂತ ಬಿರಾದಾರ ಅವರು ಪಂಚರ ಸಮಕ್ಷಮ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಆರೋಪಿತರನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿತರಿಗೆ ಭಟ್ಕಳ ತಾಲೂಕಾ ಆಸ್ಪತ್ರೆಗೆ(Bhatkal Taluku Hospital) ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ವರದಿಯಲ್ಲಿ ಆರೋಪಿತರು ಗಾಂಜಾ ಸೇವನೆ ಮಾಡಿರುವುದು ಪಾಸಿಟಿವ್ ಎಂದು ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸಂಬಂಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ(Murdeshwar Police Station) ಪ್ರಕರಣ ದಾಖಲಾಗಿದ್ದು, ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ.
ಇದನ್ನು ಓದಿ : ಶಾಸಕ ಸತೀಶ ಸೈಲ್ ರಾಜೀನಾಮೆ ಗಡುವು ಹಿನ್ನಲೆ. ಫೆ. 22ಕ್ಕೆ ಸಿಎಂ , ಡಿಸಿಎಂ ಜೋಡೆತ್ತುಗಳಾಗಿ ಕಾರವಾರಕ್ಕೆ.
ಭಟ್ಕಳದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ
ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ. ಐದು ಲಕ್ಷ ರೂ. ಹಣ ಪಡೆಯುವಾಗ ಅಧಿಕಾರಿಗಳ ದಾಳಿ.
