ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news)ರಾಜಸ್ಥಾನ(Rajasthan) :     ನ್ಯಾಯಾಧೀಶರ ಪತ್ನಿಯೋರ್ವರು‌ ರೈಲಿನ ಶೌಚಾಲಯದಲ್ಲಿ ಶವವಾಗಿ ಪತ್ತೆಯಾದ  ಘಟನೆ ನಡೆದಿದೆ.

ಜೈಪುರ(Jaipur) ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರಾಜ್‌ಕುಮಾ‌ರ್ ಚೌಹಾಣ್ ಅವರ  ಪತ್ನಿ ಉಷಾ ಚೌಹಾಣ್ ಮೃತ ದುರ್ದೈವಿ. ಜೋದ್‌ಪುರದಿಂದ ನಿಂಬಾಹೆರಾಗೆ(Jodhapur to nimbahera) ಕಾಂಚಿಗುಡ-ಭಗತ್ ಕಿ ಕೋಥಿ ಎಕ್ಸ್‌ಪ್ರೆಸ್ (17606)ನಲ್ಲಿ ಪ್ರಯಾಣಿಸುತ್ತಿದ್ದರು. ಪ್ರಯಾಣದ ವೇಳೆ ಶೌಚಾಲಯಕ್ಕೆ ತೆರಳಿದ್ದ ಉಷಾ, ಹೆಚ್ಚು ಸಮಯವಾದರೂ ಶೌಚಾಲಯದಿಂದ ಹೊರಬಂದಿರಲಿಲ್ಲ.  ಶೌಚಾಲಯದ ಬಾಗಿಲನ್ನು(Toilets Door) ರಕ್ಷಣಾ ತಂಡ(Rescue Team) ಒಡೆದು ಅಲ್ಲಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಉಷಾ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಅವರು ಮೃತಪಟ್ಟಿದ್ದಾಗಿ ವರದಿಯಾಗಿದೆ.

ನ್ಯಾಯಾಧೀಶ ರಾಜ್‌ಕುಮಾರ್ ಚೌಹಾಣ್‌ ಮತ್ತು ಅವರ ಪತ್ನಿ ರೈಲಿನಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದ ಆದರೆ ಪ್ರತ್ಯೇಕ ಬೋಗಿಗಳಲ್ಲಿ ಅವರು ಕುಳಿತಿದ್ದರು ಎನ್ನಲಾಗಿದೆ. ರೈಲು ನಿಂಬಾಹೆರಾಕ್ಕೆ ಬರುವ ಸ್ವಲ್ಪ ಸಮಯದ ಮೊದಲು, ಉಷಾ ಚೌಹಾಣ್ ತನ್ನ ಪತಿಗೆ ಕರೆ ಮಾಡಿ ತಾನು ಶೌಚಾಲಯಕ್ಕೆ ಹೋಗುತ್ತಿದ್ದೇನೆ ಎಂದು ತಿಳಿಸಿದ್ದರು. ರೈಲು ನಿಂಬಾಹೆರಾ ನಿಲ್ದಾಣವನ್ನು(Nimbaher Station) ತಲುಪಿದಾಗ, ನ್ಯಾಯಾಧೀಶರು ಇಳಿದು ತಮ್ಮ ಪತ್ನಿಗಾಗಿ ಪ್ಲಾಟ್‌ಫಾರ್ಮ್‌ನಲ್ಲಿ ಬರುವಿಕೆಗಾಗಿ ಕಾಯುತ್ತಿದ್ದರು.ಆದರೆ ಬಾರದಿದ್ದಾಗ ಆತಂಕಗೊಂಡು  ಚೌಹಾಣ್ ಜಿಆರ್‌ಪಿಗೆ ಮಾಹಿತಿ ರವಾನಿಸಿದ್ದಾರೆ.

ತಕ್ಷಣ  ಸ್ಥಳಕ್ಕೆ ಆಗಮಿಸಿದ ಜಿಆರ್‌ಪಿ ತಂಡವು(GRP Team) ನಿಂಬಹೆರಾ ನಿಲ್ದಾಣದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿತ್ತು. ರೈಲಿನಿಂದ ಉಷಾ ಚೌಹಾಣ್ ಇಳಿಯದಿರೋದನ್ನ  ಖಚಿತ ಪಡಿಸಿಕೊಂಡು  ರೈಲಿನಲ್ಲೇ ಹುಡುಕಾಟ ನಡೆಸಿದ್ದಾರೆ.   ಈ ವೇಳೆ, ಲಾಕ್ ಆಗಿದ್ದ ಶೌಚಾಲಯದ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದಾರೆ. ಬಾಗಿಲು ತೆರೆಯದಿದ್ದಾಗ, ಬಾಗಿಲನ್ನು ಒಡೆದಿದ್ದಾರೆ. ಅಲ್ಲಿ, ಉಷಾ ಪ್ರಜ್ಞಾಹೀನರಾಗಿ  ಬಿದ್ದಿದ್ದರೆಂದು‌ ಹೇಳಲಾಗುತ್ತಿದೆ. ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಿ ವೈದ್ಯರು ಪರೀಕ್ಷೆ ಮಾಡಿದಾಗ ಆಗಲೇ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.

ಇದನ್ನು ಓದಿ : ಶಾಸಕ ಸೈಲ್ ರಾಜೀನಾಮೆ ವಾಪಾಸ್. ಕಾರವಾರದಲ್ಲಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ.

ಖ್ಯಾತ ಈಜು ಪಟು, ಚಿತ್ರ ಕಲಾವಿದ ಮೋಹನ ತಾಂಡೇಲ ವಿಧಿವಶ.