ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕುಮಟಾ(Kumta) : ಪ್ರಕ್ಷುಬ್ದಗೊಂಡ ಕಡಲತೀರದಲ್ಲಿ ರೀಲ್ಸ್(Reels) ಮಾಡುವ ವೇಳೆ ಅಲೆಗೆ ಸಿಲುಕಿ ಪ್ರವಾಸಿಗನೋರ್ವ ಕಾಣೆಯಾಗಿರುವ(Tourist Missing) ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ(Kumta) ತಾಲೂಕಿನ ಕಡ್ಲೆ ಕಡಲ ತೀರದಲ್ಲಿ(Kadle Beach) ನಡೆದಿದೆ.
ಮಹಾರಾಷ್ಟ್ರದ ಪುಣೆ ಮೂಲದ(Maharashtra Pune Native) ಜೀವನ್ ಭಟ್ಟರಾಯಿ (26) ಕಾಣೆಯಾದ ಪ್ರವಾಸಿಗ. ಒಟ್ಟು ಸುಮಾರು ಐವರು ಸ್ನೇಹಿತರು ಕುಮಟಾಕ್ಕೆ ಪ್ರವಾಸಕ್ಕೆ ಬಂದಿದ್ದರು. ಎಲ್ಲರೂ ಖಾಸಗಿ ರೆಸಾರ್ಟ್‌ನಲ್ಲಿ(Private Resort) ಕಳೆದ ಮೂರು ದಿನಗಳಿಂದ ವಾಸ್ತವ್ಯ ಹೂಡಿದ್ದರು. ಸೋಮವಾರ ಕಡ್ಲೆ ಕಡಲ ತೀರಕ್ಕೆ(Kadle Beach) ತೆರಳಿದ್ದ ವೇಳೆ ರೀಲ್ಸ್ ಮಾಡುವ ಸಂದರ್ಭದಲ್ಲಿ ಜೀವನ್ ಅಲೆಯ ರಭಸಕ್ಕೆ ಸಿಲುಕಿ ಸಮುದ್ರದಲ್ಲಿ ಕೊಚ್ಚಿಹೋಗಿದ್ದಾರೆ ಎನ್ನಲಾಗಿದೆ.
ಘಟನೆ ತಿಳಿಯುತ್ತಿದ್ದಂತೆ ಕುಮಟಾ ಪೊಲೀಸರು(Kumta Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕರಾವಳಿ ಕಾವಲುಪಡೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾಣೆಯಾದ ಯುವಕನಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ(Kumta Police Station) ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಆರು ವರ್ಷದ ಬಾಲಕ ಹೃದಯಾಘಾತದಿಂದ ಸಾವು.
