ನವದೆಹಲಿ(NEWDELHI) : ಜಗತ್ತಿನ ಪ್ರಖ್ಯಾತ ಕೈಗಾರಿಕೋದ್ಯಮಿ, ಪದ್ಮವಿಭೂಷಣ ರತನ್ ಟಾಟಾ (RATAN TATA) ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿ(NARENDRA MODI) ಸೇರಿ ಹಲವು ಗಣ್ಯರು ರತನ್ ಟಾಟಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈ ನಡುವೆ ರತನ್ ಟಾಟಾ ಅವರ ಮಾಜಿ ಪ್ರೇಯಸಿ(LOVER)  ಭಾವನಾತ್ಮಕ ವಿದಾಯ ಹೇಳಿದ್ದಾರೆ.

ಉದ್ಯಮಿ ರತನ್ ಟಾಟಾರನ್ನು ಕಳೆದುಕೊಂಡ ಮಾಜಿ ಗೆಳತಿ ಸಿಮಿ ಗರೆವಾಲ್(SIMI GAREWAL)  ಭಾವುಕ ಸಂದೇಶ ಬರೆದಿದ್ದಾರೆ.  ಸಿಮಿ ತನ್ನ ಭಾವನಾತ್ಮಕ ಶ್ರದ್ಧಾಂಜಲಿಯಲ್ಲಿ ಥ್ರೂಬ್ಯಾಕ್ ಚಿತ್ರವನ್ನು ಹಂಚಿಕೊಂಡಿದ್ದು, ‘ನೀವು ಹೋಗಿದ್ದೀರಿ’ ಎಂದು ಅವರು ಹೇಳಿದ್ದಾರೆ. ನಿಮ್ಮ ನಷ್ಟವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ. ತುಂಬಾ ಕಷ್ಟ. ವಿದಾಯ ನನ್ನ ಸ್ನೇಹಿತ’ ಎಂದು ಸೋಷಿಯಲ್ ಮೀಡಿಯಾದಲ್ಲಿ(SOCIAL MEDIA) ಬರೆದುಕೊಂಡಿದ್ದಾರೆ.

2011ರ ಸಂದರ್ಶನವೊಂದರಲ್ಲಿ ಸಿಮಿ ಗರೆವಾಲ್ ರತನ್ ಟಾಟಾ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ್ದರು. ರತನ್ ಟಾಟಾ ಮತ್ತು ಸಿಮಿ ಗರೆವಾಲ್ ಸ್ನೇಹಿತರಾಗಿದ್ದು, ಡೇಟಿಂಗ್ ಮಾಡುತ್ತಿದ್ದರು. ಈ ವಿಚಾರವನ್ನು ಸಿಮಿ ಹೇಳಿಕೊಂಡಿದ್ದರು. ರತನ್ ಮತ್ತು ಸಿಮಿ ಇಬ್ಬರೂ ಮದುವೆಯಾಗಲು ಬಯಸಿದ್ದರಂತೆ. ಈ ವಿಚಾರವನ್ನು ಅವರು ಬಹಿರಂಗಪಡಿಸಿದ್ದರು. ರತನ್ ಟಾಟಾ ಕೂಡ ತಮ್ಮ ಲವ್ ಸ್ಟೋರಿ ಬಗ್ಗೆ ಕೆಲ ವೇದಿಕೆಯಲ್ಲಿ ಹಂಚಿಕೊಂಡಿದ್ದರು

ಇದನ್ನು ಓದಿ,: .ಅವಿವಾಹಿತ ಉದ್ಯಮಿ ratan ಟಾಟಾ ಜೀವನ ಸಾಧನೆ ರೋಚಕ

ಡ್ರೋನ್ ಹಾರಾಟದ ಜಾಡು ಹಿಡಿದ ಇಂಟೆಲಿಜೆನ್ಸ್

ರೈಲ್ವೆ ಟ್ರ್ಯಾಕ್ ಮ್ಯಾನ್ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ