ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ಮದುವೆ ಕಾರ್ಯಕ್ರಮಗಳಿಗೆ(Marriage Programme) ಇನ್ಮುಂದೆ  ತಡರಾತ್ರಿವರೆಗೆ ಬ್ಯಾಂಡ್ ಹಾಗೂ ಬೆಂಜೊ(Band and Banjo) ವಾದ್ಯದವರು ಸಿಗಲ್ಲ. ಹೆಚ್ಚು ವೇಳೆ ವಾದ್ಯ  ನುಡಿಸುವುದನ್ನ ನಿಲ್ಲಿಸಲು  ಕಾರವಾರದ ಬ್ಯಾಂಡ್(Karwar Band) ಹಾಗೂ ಬೆಂಜೊ ಸಂಘದವರು  ನಿರ್ಧರಿಸಿದ್ದಾರೆ.

ಮದುವೆಯ ಒಂದು ದಿನ ಮುಂಚಿತವಾಗಿ ಮದುವೆ ಮನೆಗಳಿಗೆ ತೆರಳಿ ಸೇವೆ ನೀಡುವ ಪದ್ಧತಿಯನ್ನೂ ಸ್ಥಗಿತಗೊಳಿಸಲು ಸಂಘದವರು ತೀರ್ಮಾನಿಸಿದ್ದಾರೆ. ಈ ಬಗ್ಗೆ ಕಾರವಾರದ ಪತ್ರಿಕಾ ಭವನದಲ್ಲಿ(Karwar Patrika Bhavan)  ಸುದ್ದಿಗೋಷ್ಠಿ ನಡೆಸಿ ವಿಷಯ ತಿಳಿಸಿದ್ದಾರೆ.

ಸಂಘದ ಸದಸ್ಯ ಸಂದೀಪ ಬಾಡ್ಕರ್ ಮಾತನಾಡಿ, ಇದುವರೆಗೆ ಮದುವೆಯ ಹಿಂದಿನ ದಿನವೇ ಬ್ಯಾಂಡ್ ತಂಡಗಳು(Band Team) ಮದುವೆ ಮನೆಗಳಿಗೆ ತೆರಳಿ ರಾತ್ರಿ ವೇಳೆಯಲ್ಲಿಯೂ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇವು. ಮದುವೆ ದಿನವೂ ಅನೇಕ ಬಾರಿ ತಡರಾತ್ರಿವರೆಗೆ ವಾದ್ಯ ನುಡಿಸಬೇಕಾಗುತ್ತಿತ್ತು. ಇದರಿಂದ ಮುಂದಿನ ದಿನಗಳ ಕಾರ್ಯಕ್ರಮಗಳಿಗೆ ಸಮಯಕ್ಕೆ ಸರಿಯಾಗಿ ತೆರಳಲು ನಮಗೆ ತೊಂದರೆಯಾಗುತ್ತಿದೆ. ಹಲವು ವಾದಕರು, ವಿಶೇಷವಾಗಿ ಕೀಬೋರ್ಡ್(Keyboard) ಸೇರಿದಂತೆ ವಿವಿಧ ವಾದ್ಯಗಳನ್ನು ನುಡಿಸುವ ಕಲಾವಿದರು ಒಂದಕ್ಕಿಂತ ಹೆಚ್ಚು ತಂಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ವೇಳಾಪಟ್ಟಿ ನಿರ್ವಹಣೆಯಲ್ಲಿ ಸಮಸ್ಯೆಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ಎಲ್ಲ ತಂಡಗಳೊಂದಿಗೆ ಚರ್ಚಿಸಿ ಹೊಸ ನಿಯಮ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಮುಂದೆ ಮದುವೆ ದಿನ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಬ್ಯಾಂಡ್ ಹಾಗೂ ಬೆಂಜೊ ತಂಡಗಳು ಮದುವೆ ದಿಬ್ಬಣದೊಂದಿಗೆ ಇರಲಿದೆ.  ಮದುವೆಗೆ ಒಂದು ದಿನ ಮುಂಚಿತವಾಗಿ ಮದುವೆ ಮನೆಗಳಿಗೆ ತೆರಳಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ ಎಂದರು.

ಕಾರವಾರ ತಾಲೂಕಿನಲ್ಲಿ ಒಟ್ಟು 17 ಬ್ಯಾಂಡ್ ಹಾಗೂ ಬೆಂಜೊ(Band and Banjo) ತಂಡಗಳಿದ್ದು, ಪ್ರತಿ ತಂಡದಲ್ಲಿ ಸರಾಸರಿ ಆರರಿಂದ ಏಳು ಮಂದಿ ಇದ್ದಾರೆ. ಎಲ್ಲ ತಂಡಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ವಿಜಯ್ ಕಾಂಬ್ಳೆ, ಕುಶಾಲಿ ಗುನಗಿ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ವಿನೇಶ್ ಮುದ್ಗೇಕರ, ಪ್ರವೀಣ ಸಾರಂಗ, ನಾಗೇಶ ತದಡಿಕರ, ಸಾಗರ ಅಂಬಿಗ, ಸಂದೇಶ್ ಕಢೆಕರ, ಸಂತೋಷ ಪಡಲಕರ, ವಿನಾಯಕ ಮಾಜಾಳಿಕರ, ಸರ್ವೇಶ್ ಅಂಬಿಗ, ಜಗದೀಶ ಗಡಕರ, ಅನೀಲ ಬೋಳೆಕರ, ಆನಂದ ತದಡಿಕರ, ಮುಕುಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನು ಓದಿ : ಪ್ರಕರಣ ದಾಖಲಾದರೂ ಬದಲಾಗದ ಡ್ರಗ್ ಪೆಡ್ಲರ್‌. ಕಾರವಾರ ಟು ಬಳ್ಳಾರಿ ಜೈಲ್ ಗೆ ಶಿಪ್ಟ್.