ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಲಕ್ನೋ(Laknow) : ಮೆದುಳುನಿಷ್ಕ್ರೀಯವಾಗಿದೆ(Brain Dead) ಎಂದು ಘೋಷಿಸಿದ್ದ ಮಹಿಳೆಯೋರ್ವಳನ್ನ ಮನೆಗೆ ವಾಪಸ್ ಆ್ಯಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವಾಗ, ವಾಹನ ರಸ್ತೆ ಗುಂಡಿಗೆ ಬಿದ್ದು  ಪ್ರಜ್ಞೆಗೆ ಮರಳಿರುವ ಘಟನೆ ನಡೆದಿದೆ.

ಹರಿದ್ವಾರ ಮತ್ತು ಬರೇಲಿ ರಾಷ್ಟ್ರೀಯ ಹೆದ್ದಾರಿ(Haridwara-Bareli NH)  74ರಲ್ಲಿ ಈ ಘಟನೆ ನಡೆದಿದೆ. 50 ವರ್ಷದ  ವಿನೀತಾ ಶುಕ್ಲಾ ಎಂಬ ಮಹಿಳೆ ಅನಾರೋಗ್ಯಕ್ಕೀಡಾಗಿದ್ದಳು. ಬದುಕುಳಿಯುವ ಯಾವುದೇ ಭರವಸೆ ಇಲ್ಲದೆ ಬರೇಲಿ ಆಸ್ಪತ್ರೆಯಿಂದ ಕೆಲ‌ ದಿನಗಳ ಹಿಂದೆ ಡಿಸ್ಚಾರ್ಜ್ ಮಾಡಲಾಗಿತ್ತು. ಆಕೆಯ ದುಃಖತಪ್ತ ಪತಿ ಕುಲ್‌ದೀಪ್ ಕುಮಾರ್ ಶುಕ್ಲಾ ಪತ್ನಿಯನ್ನು ಆ್ಯಂಬುಲೆನ್ಸ್ ನಲ್ಲಿ(Ambulance) ಮನೆಗೆ ಮರಳಿ ಕರೆದೊಯ್ಯುತ್ತಿದ್ದರು. ಈ ವೇಳೆ ಆ್ಯಂಬುಲೆನ್ಸ್ ರಸ್ತೆ ಗುಂಡಿಯಿರುವ ಹೆದ್ದಾರಿಯಲ್ಲಿ ಸಿಲುಕಿಕೊಂಡಿದೆ.  ಆ್ಯಂಬುಲೆನ್ಸ್ ಗುಂಡಿಗೆ ಬಿದ್ದು ಮೇಲಕ್ಕೆದ್ದಿತು. ಈ ವೇಳೆಯ ಪವಾಡ(Miracles) ನಡೆದಿದೆ.

ತನ್ನ ಪತ್ನಿ‌ ಉಸಿರಾಡುತ್ತಿಲ್ಲ.  “ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಕುಟುಂಬದ ಸದಸ್ಯರಿಗೆ ತಿಳಿಸಿದ್ದರು.  ಇಳಿಮುಖವಾಗುತ್ತಿರುವ ಹೃದಯ ಬಡಿತ(Heart Beat) ಮಾತ್ರವಿತ್ತು.  “ಆ್ಯಂಬುಲೆನ್ಸ್ ಹಫೀಝ್ ಗಂಜ್ ಬಳಿ ತಲುಪಿದಾಗ ಹೆದ್ದಾರಿಯ ದೊಡ್ಡ ರಸ್ತೆ ಗುಂಡಿಯಲ್ಲಿ ಸಿಲುಕಿಕೊಂಡಿತು. ಈ ವೇಳೆ ವಾಹನವು ತುಂಬಾ ಒರಟಾಗಿ ಚಲಿಸಿತು” ಎಂದು ವಿನೀತಾ ಶುಕ್ಲಾರ ಪತಿ ಕುಲ್‌ದೀಪ್ ಕುಮಾರ್ ಶುಕ್ಲಾ ಹೇಳಿದ್ದಾರೆ.

“ಅದರ ಮುಂದಿನ ಕ್ಷಣವೇ ಪವಾಡ(Miracles) ನಡೆಯಿತು. ನನ್ನ ಪತ್ನಿ ಮತ್ತೆ ಸಹಜವಾಗಿ ಉಸಿರಾಡಲು ಪ್ರಾರಂಭಿಸಿದಳು. ನಾನು ತಕ್ಷಣವೇ ಎಲ್ಲಾ ಅಂತ್ಯಕ್ರಿಯೆ ಸಿದ್ಧತೆಗಳನ್ನು ತಡೆಹಿಡಿಯುವಂತೆ ನನ್ನ ಕುಟುಂಬದ ಸದಸ್ಯರಿಗೆ ತಿಳಿಸಿದೆ” ಎಂದು ಅವರು ಮಾಹಿತಿ ನೀಡಿದ್ದಾರೆ.

ಕುಲ್‌ದೀಪ್ ಶುಕ್ಲಾ ತಕ್ಷಣ ತಮ್ಮ ಪತ್ನಿಯನ್ನು ಪಿಲ್ಟಿಟ್‌ನಲ್ಲಿರುವ ನ್ಯೂರೋಸಿಟಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ತುರ್ತು ವೈದ್ಯಕೀಯ ನಿಗಾವಣೆಯಡಿ ಚಿಕಿತ್ಸೆ ನೀಡಿದ ನಂತರ  ಆಕೆಯನ್ನು ಮನೆಗೆ ಕರೆತರಲಾಗಿದೆ. ಸಾವನ್ನು ಗೆದ್ದಿರುವ ಆಕೆ ಈಗ ಎಚ್ಚರವಾಗಿರುವುದಷ್ಟೇ ಅಲ್ಲ ನಮ್ಮೊಂದಿಗೆ ಮಾತನಾಡುತ್ತಲೂ ಇದ್ದಾಳೆ” ಎಂದು ಕುಲ್‌ದೀಪ್ ಕುಮಾ‌ರ್ ಶುಕ್ಲಾ ಸಂತಸ ಹಂಚಿಕೊಂಡಿದ್ದಾರೆ.

ಇದನ್ನು ಓದಿ : ಪೊಲೀಸ್  ಕಾರ್ಯಾಚರಣೆ : ಮೂವರು ಗಾಂಜಾ ಪೆಡ್ಲರ್ ಗಳ ಬಂಧನ.

ಕಾರವಾರ ನಗರದಲ್ಲಿ ಬಿದ್ದ ಬಾರೀ ಗಾತ್ರದ ಮರದ ಟೊಂಗೆ. ತಪ್ಪಿದ ದುರಂತ.