ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದಾಂಡೇಲಿ(Dandeli) : ಕುಳಗಿ ವನ್ಯಜೀವಿ ವಲಯ(Kulgi wildlife Range) ವ್ಯಾಪ್ತಿಯ ಜಮಗಾ ಬಳಿ ಅರಣ್ಯ ಪ್ರದೇಶದಲ್ಲಿ ಹೆಣ್ಣಾನೆಯೊಂದು (Elephant) ಆಕಸ್ಮಿಕವಾಗಿ ಮೃತಪಟ್ಟ ಘಟನೆ ನಡೆದಿದೆ.
ಮಂಗಳವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದ್ದು ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಸಿಬ್ಬಂದಿಗಳಿಗೆ ಆನೆ (Elephant) ಮೃತಪಟ್ಟಿರುವುದು ಗೊತ್ತಾಗಿದೆ. ಆನೆ ಸಾಗುವಾನಿ ಮರಕ್ಕೆ ಬೆನ್ನು ಉಜ್ಜಿಕೊಳ್ಳುವ ಸಂದರ್ಭದಲ್ಲಿ, ಮರ ಅಲುಗಾಡಿ ಮರದ ಮೇಲ್ಗಡೆಯಿಂದ ಹಾದು ಹೋಗಿದ್ದ 220 kv ಹೈ ಟೆನ್ಶನ್ ವಿದ್ಯುತ್ ತಂತಿಗೆ ಮರದ ಗೆಲ್ಲು ತಾಗಿರುವುದರಿಂದ, ಆನೆ ವಿದ್ಯುತ್ ಶಾಕ್ ನಿಂದ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಮೃತ ಆನೆ ಹೆಣ್ಣಾನೆಯಾಗಿದ್ದು, 14 ರಿಂದ 15 ವರ್ಷ ವಯಸ್ಸಿರಬಹುದೆಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ವನ್ಯಜೀವಿ ಇಲಾಖೆಯ ನಿರ್ದೇಶಕ ನಿಲೇಶ ಶಿಂದೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಕಳ್ಳಿಮಠ, ಕುಳಗಿ ವಲಯಾರಣ್ಯಾಧಿಕಾರಿ ಸಾಗರ್ ಹಾಗೂ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಬುಧವಾರ ಮಧ್ಯಾಹ್ನ ಮೃತ ಆನೆಯ ಅಂತ್ಯಸಂಸ್ಕಾರ ನಡೆಸಲಾಗಿದೆ.
ಇದನ್ನು ಓದಿ : ರಷ್ಯಾ ಯೋಧನಿಗೆ ಗೋಕರ್ಣದಲ್ಲಿ ಮೋಕ್ಷ ಕಾರ್ಯ.
ಸಮುದ್ರದಲ್ಲಿ ಎತ್ತರದ ಅಲೆಗಳ ಏಳುವ ಸಾಧ್ಯತೆ ಎಚ್ಚರವಹಿಸಿ : ಜಿಲ್ಲಾಧಿಕಾರಿ