ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ(Dr G Parameshwar) ಅವರ ಆಪ್ತರಾಗಿರುವ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ(Congress Leader Gopalkrishna Nayak) ಅವರ ಮೇಲೆ ಅಂಕೋಲಾದಲ್ಲಿ ಮಾರಕಾಸ್ತ್ರಗಳಿಂದ ಹತ್ಯೆ ಯತ್ನ ಘಟನೆ ಸಂಚಲನ ಮೂಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಫೋಟೋಗಳು ಹಾಗೂ ದಾಳಿ ದೃಶ್ಯಗಳ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ(Social Media) ವೈರಲ್ ಆಗಿವೆ.
ನಿನ್ನೆ ಬೆಳಿಗ್ಗೆ ಶೇವಿಂಗ್ ಮಾಡಿಸಿಕೊಳ್ಳಲು ಒಬ್ಬರೇ ತೆರಳಿದ್ದ ವೇಳೆ ಐದಾರು ಜನರ ಗುಂಪು ಏಕಾಏಕಿ ದಾಳಿ ನಡೆಸಿತ್ತು. ದಾಳಿಯಿಂದ ತಪ್ಪಿಸಿಕೊಂಡ ಗೋಪಾಲಕೃಷ್ಣ ನಾಯಕ(Gopalkrishna Nayak) ಸಮೀಪದ ಬ್ಯಾಂಕ್‌ವೊಂದರೊಳಗೆ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದರು. ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಮಣಿಪಾಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳೆಲ್ಲರೂ ಗೋವಾ ಮೂಲದವರೆಂದು ಹೇಳಲಾಗಿದ್ದು ಕಳೆದ ಮೂರು ತಿಂಗಳಿನಿಂದಲೇ ಕೊಲೆಗೆ ಸ್ಕೆಚ್ ರೂಪಿಸಿದ್ದರು ಎನ್ನಲಾಗಿದೆ. ಅಂಕೋಲಾದಲ್ಲಿಯೇ(Ankola) ಮನೆ ಬಾಡಿಗೆಗೆ ಪಡೆದು ನಾಯಕನ ಚಟುವಟಿಕೆಗಳ ಮೇಲೆ ನಿಗಾವಹಿಸಿದ್ದ ಹಂತಕರು, ಅವರು ಒಬ್ಬಂಟಿಯಾಗಿ ಇರುವ ಸಮಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ಅಂಕೋಲಾದ ವಿವಿಧ ರಸ್ತೆಗಳ ಬಗ್ಗೆ ಆರೋಪಿತರು ತಿಳಿದುಕೊಂಡು ಗೋಪಾಲಕೃಷ್ಣ ನಾಯಕರ ಫೋಟೋ ನೀಡಿ ಸುಪಾರಿ ನೀಡಲಾಗಿತ್ತು ಎಂಬ ಮಾಹಿತಿ ಕೂಡ ಹೊರಬಂದಿದೆ.
ಪ್ರಕರಣದ ಹಿಂದೆ ಸ್ಥಳೀಯರ ಕೈವಾಡ ಇರುವ ಶಂಕೆಯೂ ವ್ಯಕ್ತವಾಗಿದ್ದು, ರಾಜಕೀಯವಾಗಿ ಬೆಳೆಯುವುದನ್ನು ತಡೆಯಲು ಈ ದಾಳಿ ನಡೆದಿರಬಹುದೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.
ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ತಪ್ಪಿಸಿಕೊಂಡಿರುವ ಆರೋಪಿಗಳಿಗಾಗಿ ಗೋವಾದಲ್ಲಿ ರಾತ್ರಿ ವೇಳೆ ವಿಶೇಷ ಕಾರ್ಯಾಚರಣೆ(Special Operations) ನಡೆಸಲಾಗಿದೆ. ಉತ್ತರಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಅವರ ನೇತೃತ್ವದಲ್ಲಿ ತನಿಖೆ ಮುಂದುವರೆದಿದ್ದು, ಪಶ್ಚಿಮ ವಲಯ ಐಜಿಪಿ ಕಾರವಾರದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಘಟನೆಯ ಸಿಸಿಟಿವಿ ದೃಶ್ಯ ಲಭ್ಯವಾಗಿದ್ದು, ದಾಳಿಯ ಕ್ಷಣಗಳು ಸ್ಪಷ್ಟವಾಗಿ ದಾಖಲಾಗಿವೆ. ಅಂಕೋಲಾದಲ್ಲಿ ನಡೆದ ಈ ಘಟನೆ ಜಿಲ್ಲೆಯಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಆರೋಪಿತರಿಗೆ ಕುಮ್ಮುಕ್ಕು ನೀಡಿದವರ ಹೆಜ್ಜೆ ಗುರುತು ಪತ್ತೆ ಮಾಡಲು ಪೊಲೀಸರು ತನಿಖೆ(Police Investigation) ಮುಂದುವರಿಸಿದ್ದಾರೆ.
ಇದನ್ನು ಓದಿ : ಅಂಕೋಲಾಕ್ಕೆ ದುಷ್ಕರ್ಮಿಗಳನ್ನ ಕರೆಸಿದವರಾರು? ಸಿಸಿಟಿವಿಯಲ್ಲಿ ದೃಶ್ಯ ಸಂಭಾಷಣೆ ಸೆರೆ.
ಕಾಂಗ್ರೆಸ್ ಮುಖಂಡನ ಹತ್ಯೆಗೆ ಯತ್ನ ಕೇಸ್. ಎಸ್ಕೇಪ್ ಆದ ದುಷ್ಕರ್ಮಿಗಳು ಲಾಕ್.
ಗೃಹ ಸಚಿವರ ಆಪ್ತ, ಕಾಂಗ್ರೆಸ್ ಮುಖಂಡ ಅಂಕೋಲಾದ ಗೋಪಾಲಕೃಷ್ಣ ನಾಯಕ ಹತ್ಯೆಗೆ ಯತ್ನ.
