ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ಮದ್ಯಸೇವಿಸಲು ಹಣ ನೀಡದ ಅಳಿಯನನ್ನೆ ಕೊಂದ ಮಾವನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಕರಣದಲ್ಲಿ 10 ಸಾವಿರ ರೂ ದಂಡ ಮತ್ತು ಮೃತನ ಹೆಂಡತಿಗೆ 50 ಸಾವಿರ ರೂ ಪರಿಹಾರ ನೀಡುವಂತೆ ಮಹತ್ವದ ತೀರ್ಪು ನೀಡಿದ ಶಿರಸಿ ಪೀಠದ ಜಿಲ್ಲಾ ನ್ಯಾಯಧೀಶರಾದ ಕಿರಣ್ ಕಿಣಿ ಆದೇಶಿಸಿದ್ದಾರೆ.
ಶಿರಸಿ ತಾಲೂಕಿನ(Sirsi Taluku) ಮಳಲಿ ಗ್ರಾಮದ ವೆಂಕಟರಮಣ ಗಣಪ ಗೌಡಾ ಕೊಲೆ ಪ್ರಕರಣದ ಆರೋಪಿ. ಇವರು ತಮ್ಮ ಅಳಿಯ ಮಂಜುನಾಥ ರಾಮಾ ಗೌಡಾ ಅವರನ್ನ 02-05-2024 ರಂದು ಮನೆಯವರು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ಯಾರೂ ಇಲ್ಲದ ಸಮಯ ನೋಡಿ ಕೊಲೆ ಮಾಡುವ ಉದ್ದೇಶದಿಂದ ಕಟ್ಟಗೆಯಿಂದ ಹೊಡೆದು ಕೊಲೆ ಮಾಡಿದ್ದನು.
ಶಿರಸಿ ಗ್ರಾಮೀಣ ಠಾಣಾ(Sirsi Rural Station) ಸಿಪಿಐ ಸೀತಾರಾಮ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ಗಂಭೀರವಾಗಿ ಪರಿಗಣಿಸಿ ಸಮರ್ಥವಾಗಿ ತಮ್ಮ ವಾದವನ್ನು ಮಂಡಿಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಕೊಡಿಸುವಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ ಎಂ ಮಳಗಿಕರ್ ಯಶಸ್ವಿಯಾಗಿದ್ದಾರೆ.
ಇದನ್ನು ಓದಿ : ಹೊನ್ನಾವರದಲ್ಲಿ ಅಪರಿಚಿತ ವಾಹನ ಡಿಕ್ಕಿ: ಕಾಂಗ್ರೆಸ್ ಮುಖಂಡನ ಪುತ್ರ ಸಾವು
ಹಲ್ಲೆಗೂ ನಮಗೂ ಯಾವ ಸಂಬಂಧವೂ ಇಲ್ಲ. ನಾಯಕ ಕುಟುಂಬದ ಹೇಳಿಕೆ.
ಏಪ್ರಿಲ್ 5ರಿಂದ 9ರವರೆಗೆ ಮುಂಡಳ್ಳಿಯಲ್ಲಿ ಅಮ್ಮನವರ ಅಷ್ಟಬಂಧ ಬ್ರಹ್ಮಕಲಶೋತ್ಸವ

