ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangalore) : ನಗರದ ಹೆಬ್ಬಾಳದಿಂದ ನಾಗಶೆಟ್ಟಿಹಳ್ಳಿಗೆ(Hebbal to Nagashettihalli) ಹೋಗುವ ಬಸ್ ಹತ್ತಿದ ಸಾರಿಗೆ ಸಚಿವ ಬೈರತಿ ಸುರೇಶ್(Minister Bairati Suresh) ಅವರು ಚಿಲ್ಲರೆ ನೀಡಲಿಲ್ಲ ಎಂದು ಕಂಡಕ್ಟರ್ ಕೆಳಕ್ಕೆ ಇಳಿಸಿದ ಘಟನೆ ನಡೆದಿದೆ.
ಬಸ್ ಸಂಚಾರ ಮಾಡುವಾಗ ಎರಡು ಟಿಕೆಟ್ ನೀಡುವಂತೆ ಸಚಿವರು ಕೇಳಿ, 100 ರೂಪಾಯಿ ನೋಟನ್ನು ನೀಡಿದ್ದರು. ಆಗ ಕಂಡಕ್ಟರ್ ಚಿಲ್ಲರೆ ಕೊಡಿ ಎಂದಾಗ ಪ್ರತಿಯಾಗಿ ಸಚಿವರು ಚಿಲ್ಲರೆ ಇಲ್ಲ ಎಂದಿದ್ದಕ್ಕೆ, ತನ್ನ ಬಳಿ ಚಿಲ್ಲರೆ ಇಲ್ಲದಿರುವುದನ್ನು ಬ್ಯಾಗ್ ತೋರಿಸಿ ಹೇಳಿದ ಕಂಡಕ್ಟರ್, ಚಿಲ್ಲರೆ ಇಲ್ಲದಿದ್ದರೆ ಕೆಳಗೆ ಇಳಿಯುವಂತೆ ಸಚಿವರಿಗೆ ಸೂಚಿಸಿದ. ಮರು ಮಾತಾನಾಡದೇ ಸಚಿವರು ಬಸ್ ನಿಂದ ಕೆಳಗಿಳಿದ್ದಾರೆ.
ಬಿಎಂಟಿಸಿ ಬಸ್ ಗಳಲ್ಲಿ(BMTC Bus) ದಿಢೀರ್ ಪ್ರಯಾಣಿಸುವ ಮೂಲಕ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಪ್ರಯಾಣಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ರಿಯಾಲಿಟಿ ತಿಳಿದುಕೊಂಡರು.
ಶನಿವಾರ ರಾತ್ರಿ 7.10 ಯಿಂದ 9.10 ರವರೆಗೆ ಜಯಮಹಲ್(Jayamahal) ನಿಂದ ಟಿವಿ ಟವರ್, ಟಿವಿ ಟವರ್ ನಿಂದ ಆರ್ ಟಿ ನಗರ, ಆರ್ ಟಿ ನಗರದಿಂದ ಸಿಬಿಐ ರಸ್ತೆ(RT Nagar to CBI Road), ಸಿಬಿಐ ಜಂಕ್ಷನ್ ನಿಂದ ಮುಂದಿನ ನಿಲ್ದಾಣ, ಸಿಬಿಐ ಸ್ಟಾಪ್ ನಿಂದ ಮಸೀದಿ ಸ್ಟಾಪ್ ನಿಂದ ಬಳ್ಳಾರಿ ಮುಖ್ಯರಸ್ತೆ, ಅಲ್ಲಿಂದ ಆಟೋದಲ್ಲಿ ಹೆಬ್ಬಾಳಕ್ಕೆ, ಹೆಬ್ಬಾಳದಿಂದ ಭೂಪಸಂದ್ರ, ಹೆಬ್ಬಾಳ ರಿಂಗ್ ರಸ್ತೆಯಿಂದ ಮಾನ್ಯತಾ ಟೆಕ್ ಪಾರ್ಕ್, ನಾಗವಾರ, ನಾಗವಾರದಿಂದ ಹೆಣ್ಣೂರು, ಹೆಣ್ಣೂರಿನಿಂದ ಹೆಣ್ಣೂರು ಬಂಡೆ, ಬಂಡೆಯಿಂದ ಬೈರತಿ ಬಂಡೆ, ಬೈರತಿ ಬಂಡೆಯಿಂದ ಗೆದ್ಲಹಳ್ಳಿವರೆಗೆ 10 ಕ್ಕೂ ಹೆಚ್ಚು ಬಸ್ ಗಳಲ್ಲಿ ಪ್ರಯಾಣ ಮಾಡಿ, ಬಿಎಂಟಿಸಿ ವ್ಯವಸ್ಥೆಯನ್ನು ಕಣ್ಣಾರೆ ಪರಿಶೀಲಿಸಿದ್ದಾರೆ.
ಸಚಿವರು ಮಾಸ್ಕ್ ಹಾಕಿ ಪ್ರಯಾಣ ಮಾಡಿದ್ದರಿಂದ ಬಸ್ ನಲ್ಲಿದ್ದ ಪ್ರಯಾಣಿಕರಿಗಾಗಲೀ ಅಥವಾ ಚಾಲಕ, ಕಂಡಕ್ಟರ್ ಅವರಿಗೆ ಯಾರು ಎಂಬುದು ಗೊತ್ತಾಗಿಲ್ಲ. ಪ್ರತಿ ಬಸ್ ಹತ್ತಿದಾಗಲೂ ನಿಗದಿತ ಹಣ ನೀಡಿ ಪ್ರಯಾಣಿಸಿದ ಸಚಿವರು, ಕೆಲವು ಪ್ರಯಾಣಿಕರೊಂದಿಗೆ ಬಸ್ ಸಂಚಾರದ ಬಗ್ಗೆ ಮಾಹಿತಿ ಪಡೆದರು.
ಜಯಮಹಲ್ ನಿಂದ ತೆರಳುತ್ತಿದ್ದ ಕೆಎ 57 ಎಫ್ 3372 ಸಂಖ್ಯೆಯ ಬಸ್ ಫನ್ ವರ್ಲ್ಡ್ ನಲ್ಲಿ ಸ್ಟಾಪ್ ನಲ್ಲಿ ಪ್ರಯಾಣಿಕರೊಬ್ಬರು ಕೈ ತೋರಿಸಿದರೂ ನಿಲುಗಡೆ ಮಾಡಲಿಲ್ಲ. ಹಿಂದಿನ ಬಸ್ ನಲ್ಲಿದ್ದ ಸಚಿವ ಬೈರತಿ ಸುರೇಶ್ ಅವರು, ಸದರಿ ಬಸ್ ನ ಕಂಡಕ್ಟರ್ ದಯಾನಂದ್ ಮತ್ತು ಚಾಲಕ ಮುಸ್ತಾಕ್ ಅವರನ್ನು ಅಮಾನತು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆಚ್ಚಿಗೆ ಹಣ ಕೇಳಿದ ಆಟೋ ಚಾಲಕ : ನಾಗಶೆಟ್ಟಿಯಲ್ಲಿ ಆಟೋ ಏರಿದ ಸಚಿವ ಭೈರತಿ ಅವರು ಸುಮಾರು ಒಂದು ಕಿಲೋಮೀಟರ್ ಪ್ರಯಾಣಿಸಿ ಇಳಿದುಕೊಂಡರು. ಈ ಸಂದರ್ಭದಲ್ಲಿ ಆಟೋ ಮೀಟರ್ ನಲ್ಲಿ 30 ರೂಪಾಯಿ ತೋರಿಸಿದರೂ ಚಾಲಕ 36 ರೂಪಾಯಿ ನೀಡುವಂತೆ ಬೇಡಿಕೆ ಇಟ್ಟ. ಯಾಕೆ ಹೆಚ್ಚು ಎಂದು ಸಚಿವರು ಪ್ರಶ್ನಿಸಿದ್ದಕ್ಕೆ, ಮೀಟರ್ ಸರಿಯಿಲ್ಲವೆಂದ ಆಗ ಸಚಿವರು 40 ರೂಪಾಯಿಗಳನ್ನು ನೀಡಿ ಆಟೋದಿಂದ ಕೆಳಗಿಳಿದು ನಡೆದಿದ್ದಾರೆ.
Reality Check/ ಚಿಲ್ಲರೆ ಇಲ್ಲದಕ್ಕೆ ಬಸ್ಸಿಂದ ಕೆಳಕ್ಕೆ ಇಳಿಸಿದ ಕಂಡಕ್ಟರ್. ಹೆಚ್ಚಿಗೆ ಹಣ ಕೇಳಿದ ಆಟೋ ಚಾಲಕ.
