ಇ ಸಮಾಚಾರ ಡಿಜಿಟಲ್ ನ್ಯೂಸ್(esamachara  digital news) ಶಿರಸಿ(Sirsi) : ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ(Sirsi) ಭಾರೀ ರಸ್ತೆ ಅಪಘಾತ(Road Accident) ಸಂಭವಿಸಿದೆ. ಪರಿಣಾಮವಾಗಿ  40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಶಿರಸಿ–ಕುಮಟಾ ರಸ್ತೆಯ(Sirsi-Kumta Road) ಕೊಳಗಿಬೀಸ್ ಸಮೀಪ ಈ ದುರ್ಘಟನೆ ನಡೆದಿದ್ದು, ಅಪಘಾತದ ಪರಿಣಾಮ ಕೆಲಕಾಲ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ಭಟ್ಕಳದಿಂದ ಬಾಗಲಕೋಟೆ(Bhatkal to Bagalakote) ಕಡೆಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್ ಮತ್ತು ಶಿರಸಿಯಿಂದ ಕುಮಟಾ(Sirsi to Kumta) ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್(Private Bus) ನಡುವೆ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಎರಡೂ ಬಸ್‌ಗಳ ಮುಂಭಾಗ ಸಂಪೂರ್ಣ ಜಖಂ ಆಗಿದೆ.

ಗಾಯಾಳುಗಳನ್ನು ತಕ್ಷಣವೇ ಶಿರಸಿ ಸರ್ಕಾರಿ ಆಸ್ಪತ್ರೆಗೆ(Sirsi Government Hospital) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಶಿರಸಿ ಗ್ರಾಮೀಣ ಪೊಲೀಸರು(Sirsi Rural Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.

ಇದನ್ನು ಓದಿ : ಖೈದಿಯ ಕೂಲಿ ಹಣಕ್ಕೆ ಕೈ ಚಾಚಿದ ಜೈಲರ್  ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ

ಸೊಸೈಟಿಯಲ್ಲಿ ₹5 ಕೋಟಿ ಅವ್ಯವಹಾರ. ಬೇಲಿಯೇ ಎದ್ದು ಹೊಲ ಮೇಯ್ದ ಕಥೆ.

ಶಿರಸಿ: ಅಳಿಯನ ಕೊಂದಾತನಿಗೆ ಜೀವಾವಧಿ ಶಿಕ್ಷೆ.