ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಭಟ್ಕಳ(Bhatkal) :  ಅಕ್ರಮವಾಗಿ ನಡೆಯುತ್ತಿದ್ದಜಾನುವಾರುಗಳ ಸವಾರಿಗೆ  ಭಟ್ಕಳ ಪೊಲೀಸರು(Bhatkal Police) ಬ್ರೇಕ್ ಹಾಕಿದ್ದಾರೆ. ಪ್ರತ್ಯೇಕ ಪ್ರಕರಣಗಳಲ್ಲಿ ಎತ್ತು ಮತ್ತು ಒಂಟೆಗಳನ್ನ ರಕ್ಷಣೆ(Oxen and Camels Rescue) ಮಾಡಿದ್ದಾರೆ.

  ಭರ್ಜರಿ ಕಾರ್ಯಾಚರಣೆಯಲ್ಲಿ   8 ಒಂಟೆಗಳು ಹಾಗೂ 2 ಎತ್ತುಗಳನ್ನು ರಕ್ಷಿಸುವಲ್ಲಿ(Rescue) ಯಶಸ್ವಿಯಾಗಿದ್ದಾರೆ. ಅಲ್ಲದೇ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಧ್ಯಪ್ರದೇಶ(Madhyapradesh) ಮೂಲದ 26 ವರ್ಷದ ಕರಣ ಬಾಬರ, ಮಹಾರಾಷ್ಟ್ರದ(Maharashtra) 22 ವರ್ಷದ ಸುಹಾಸ ಸೂರ್ಯವಂಶಿ ಹಾಗೂ 19 ವರ್ಷದ ಯಶ ಗೋಟಕಿಂಡೆ ಬಂಧಿತರು.

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ(Bhatkal Rural Police Station) ವ್ಯಾಪ್ತಿಯಲ್ಲಿ  ನಿನ್ನೆ ಬೆಳಿಗ್ಗೆ  ಶಿರಾಲಿ ಕಡೆಯಿಂದ ಉಳ್ಳಾಲದತ್ತ(Shirali to Ullal) ಸಾಗುತ್ತಿದ್ದ ಮಹಾರಾಷ್ಟ್ರ ನೋಂದಣಿಯ MH-09/HD-5448 ಸಂಖ್ಯೆಯ ಎಸ್.ಎಮ್.ಎಲ್ ಸಾಮ್ರಾಟ್ ಲಾರಿಯನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ. ಲಾರಿಯ ಹಿಂಭಾಗದಲ್ಲಿ ಸುಮಾರು 3.75 ಲಕ್ಷ ರೂಪಾಯಿ ಮೌಲ್ಯದ 8 ಒಂಟೆಗಳನ್ನು(Camels) ಅತ್ಯಂತ ಅಮಾನುಷವಾಗಿ ಕಟ್ಟಿ ಒಯ್ಯಲಾಗುತಿತ್ತು.  ಯಾವುದೇ ಮೇವು ಹಾಗೂ ನೀರಿನ ವ್ಯವಸ್ಥೆ ಇಲ್ಲದೆ, ಸಾಗಾಟಕ್ಕೆ ಅಗತ್ಯವಾದ ಯಾವುದೇ ಪರವಾನಿಗೆಯನ್ನೂ ಹೊಂದದೆ ಈ ಮೂಕ ಪ್ರಾಣಿಗಳನ್ನು ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿತ್ತು.

ಮತ್ತೊಂದು ಪ್ರಕರಣದಲ್ಲಿ  ಭಟ್ಕಳ ನಗರ ಪೊಲೀಸ್ ಠಾಣೆ(Bhatkal Town Police Station) ವ್ಯಾಪ್ತಿಯ ಬಂದರ ರೋಡ್ ಪ್ರದೇಶದಲ್ಲಿ  ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಏಪ್ರಿಲ್ 20 ರಂದು ರಾತ್ರಿ  ದಾಳಿ ನಡೆಸಿದ್ದಾರೆ. ಈ ವೇಳೆ ಜಾನುವಾರುಗಳನ್ನು(Cattles) ವಧೆ ಮಾಡುವ ಉದ್ದೇಶದಿಂದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ 2 ಎತ್ತುಗಳನ್ನು ನೀರು, ಮೇವು ನೀಡದೆ ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಪತ್ತೆಯಾಗಿದೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ 42 ವರ್ಷದ ಮೊಹಮ್ಮದ್ ಶಿಯಾಮ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎತ್ತುಗಳನ್ನು ರಕ್ಷಣೆ ಮಾಡಲಾಗಿದೆ.

ಎರಡೂ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ Prevention of Cruelty to Animals Act-1960 ಹಾಗೂ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ರ ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಇದನ್ನು ಓದಿ : ನಾಡದೋಣಿ ಮೀನುಗಾರರ ಸೀಮೆ ಎಣ್ಣೆ ದರ ಏರಿಕೆ. ಕಡಲ ಮಕ್ಕಳ ಆಕ್ರೋಶ, ಧರಣಿ ಎಚ್ಚರಿಕೆ.

ಭಟ್ಕಳದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ನಡುವೆ ಅಪಘಾತ. ಇಬ್ಬರು ಗಂಭೀರ.

ದಾಂಡೇಲಿಯಲ್ಲಿ ಭೀಕರ ಅಪಘಾತ. ಇಬ್ಬರ ದುರ್ಮರಣ.