ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉತ್ತರ ಕನ್ನಡ ಹಾಗೂ ಸ್ಟಾರ್ ಚಾಯ್ಸ್ ನೃತ್ಯ ಮತ್ತು ಕಲಾಕೇಂದ್ರ(Star Choice Dance and Art Center) ಕಾರವಾರ ಇವರ ಸಹಯೋಗದಲ್ಲಿ 2025-26ನೇ ಸಾಲಿನ ಸಾಮಾನ್ಯ ಧನ ಸಹಾಯ ಯೋಜನೆಯ ಅಡಿಯಲ್ಲಿ ” ಸಾಂಸ್ಕೃತಿಕ ವೈಭವ” -2025 ರ ಕಾರ್ಯಕ್ರಮ ಅದ್ದೂರಿಯಿಂದ ನಡೆಯಿತು.
ಸುಂಕೇರಿಯ ರಿವರ್ ಡೆಕ್(Sunkeri River Deck) ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದ ರಾಘು ನಾಯ್ಕ ಉದ್ಘಾಟಿಸಿದರು. ಅಧ್ಯಕ್ಷತೆಯನ್ನ ನ್ಯಾಯವಾದಿ ಚರಣ್ ನಾಯ್ಕ ವಹಿಸಿದ್ದರು. ಅತಿಥಿಗಳಾಗಿ ಸಮಾಜ ಸೇವಕರಾದ ಸುನಿಲ್ ತಾಮ್ಸೆ, ಯೋಗಾ ಗುರುಗಳಾದ ಪ್ರಶಾಂತ್ ರೇವಣಕರ್ ಅವರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ವೈಭವ(Cultural Vaibhava) ಕಾರ್ಯಕ್ರಮದಲ್ಲಿ ಸೀತಾ ಗೌಡ ಹಾಗೂ ಸಂಗಡಿಗರಿಂದ ಜಾನಪದ ನೃತ್ಯ, ಸ್ವಾತಿ ಹಾಗೂ ಸಂಗಡಿಗರಿಂದ ಶಾಸ್ತ್ರೀಯ ನೃತ್ಯ, ಅಭಿಷೇಕ್ ನೇತ್ರೇಕರ್ ಸಂಗಡಿಗರು ಸಮೂಹ ನೃತ್ಯವನ್ನು ಪ್ರದರ್ಶಿಸಿದರು.
ಪ್ರಫುಲ್ ಹಾಗೂ ಸಂಗಡಿಗರಿಂದ ಸುಗಮ ಸಂಗೀತ(Sugama Sangeeta) ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸ್ಟಾರ್ ಚಾಯ್ಸ್ ಹಿರಿಯ ವಿದ್ಯಾರ್ಥಿಗಳಿಂದ(Star Choice Senior Students) ದೇಶಭಕ್ತಿ ನೃತ್ಯ(Patriotism) ಪ್ರದರ್ಶನಗೊಂಡಿತು.
ವೇದಿಕೆಯಲ್ಲಿ ಸ್ಟಾರ್ ಚಾಯ್ಸ್ ಸಂಸ್ಥೆಯ ಸಂಸ್ಥಾಪಕ ರಾಜನ್ ಬಾನಾವಳಿಕರ, ಅಧ್ಯಕ್ಷ ರೋಹಿದಾಸ್ ಬಾನಾವಳಿಕರ, ಗೌರವಾಧ್ಯಕ್ಷ ಪ್ರಕಾಶ ನಾಯ್ಕ, ಜ್ಯೋತಿ ನಾಯ್ಕ, ಸಂಗೀತ ನಾಯ್ಕ, ಸಂಜು, ಸ್ಟಾರ್ ಚಾಯ್ಸ್ ನ ಸಂಸ್ಥೆಯ ಸದಸ್ಯರು, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಲ್ ತ್ರಿವೇಣಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರೂಪಿಸಿದರು.
ಇದನ್ನು ಓದಿ : ಒಂಟೆ ಎತ್ತುಗಳ ಅಕ್ರಮ ಸಾಗಾಟ. ಪತ್ತೆ ಮಾಡಿ ರಕ್ಷಿಸಿದ ಭಟ್ಕಳ ಪೊಲೀಸರು.
ನಾಡದೋಣಿ ಮೀನುಗಾರರ ಸೀಮೆ ಎಣ್ಣೆ ದರ ಏರಿಕೆ. ಕಡಲ ಮಕ್ಕಳ ಆಕ್ರೋಶ, ಧರಣಿ ಎಚ್ಚರಿಕೆ.
ಭಟ್ಕಳದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ನಡುವೆ ಅಪಘಾತ. ಇಬ್ಬರು ಗಂಭೀರ.
