ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಮೋಟಾರ್ ಬೈಕ್ ಗಳ(Motor Bikes) ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ಸಂಶುದ್ದೀನ್ ಸರ್ಕಲ್(Samshuddin Circle) ಸಮೀಪ ಮಂಗಳವಾರ ನಡೆದಿದೆ.
ಗೋವಾದಿಂದ ಕೇರಳದ ಎರ್ನಕುಲಂ(Goa to Keral Ernakulam) ಕಡೆ ಪ್ರಯಾಣಿಸುತ್ತಿದ್ದ ಮನೋಜ್ ಹಾಗೂ ಮಂಗಳೂರು ಸುರತ್ಕಲ್ನಿಂದ ಭಟ್ಕಳದತ್ತ(Mangalore suratkal to Bhatkal) ಬರುತ್ತಿದ್ದ ಜಲೀಲ್ ಎಂಬುವವರು ರಾಯಲ್ ಎನ್ಫೀಲ್ಡ್ (Royal Enfield) ಬೈಕ್ಗಳಲ್ಲಿ ಸಂಚರಿಸುತ್ತಿದ್ದರು. ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಪರಾಧ ಪ್ರಕರಣದಲ್ಲಿ ಆರೋಪಿಯಾಗಿರುವ ಜಲೀಲ್ ಭಟ್ಕಳ ನ್ಯಾಯಾಲಯಕ್ಕೆ(Bhatkal Court) ಹಾಜರಾಗಲು ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಪಘಾತದ ಪರಿಣಾಮ ಮನೋಜ್ ಅವರ ಬಲಗಾಲಿಗೆ ತೀವ್ರ ಗಾಯವಾಗಿದ್ದು, ಜಲೀಲ್ ಅವರಿಗೆ ಮೈಕೈ ಭಾಗಗಳಲ್ಲಿ ಗಂಭೀರವಾಗಿ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಭಟ್ಕಳ ಸರಕಾರಿ ಆಸ್ಪತ್ರೆಗೆ(Bhatkal Government Hospital) ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್(Manipal) ಹಾಗೂ ಕುಂದಾಪುರ(Kundapur) ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ಸ್ಥಳಕ್ಕೆ ಭಟ್ಕಳ ನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ(Bhatkal Town Police) ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನು ಓದಿ : ದಾಂಡೇಲಿಯಲ್ಲಿ ಭೀಕರ ಅಪಘಾತ. ಇಬ್ಬರ ದುರ್ಮರಣ.
ವೈದ್ಯನ ಹತ್ಯೆ ಆರೋಪಿ ಬಂಧನ. 24 ಗಂಟೆಯೊಳಗೆ ಪ್ರಕರಣ ಭೇಧಿಸಿದ ಪೊಲೀಸರು
