ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಹೊನ್ನಾವರ(Honnavar) : ಕಟಿಂಗ್ ಮಷೀನ್ ಬ್ಲೆಡ್ ಕುತ್ತಿಗೆಗೆ ತಾಗಿ ಗಾರೆ ಕೆಲಸಗಾರನೋರ್ವ ದುರ್ಮರಣಕ್ಕೀಡಾದ ಘಟನೆ ಪಟ್ಟಣದ ಬಜಾರ್ ರಸ್ತೆ(Bazar Road) ಸಮೀಪ ನಡೆದಿದೆ.
ತಾಲೂಕಿನ ಹಳದಿಪುರ ಗ್ರಾಮದ(Haladipur Village) ಬಡ್ನಿಕೇರಿಯ ರಾಘವೇಂದ್ರ ಗಣಪು ಗೌಡ (46) ಮೃತ ದುರ್ದೈವಿ. ಪಟ್ಟಣದ ಬಜಾರ್ ರಸ್ತೆಯಲ್ಲಿರುವ ಗುರುದತ್ತ ವಿ. ಕಾಮತ ಅವರ ಮನೆಯಲ್ಲಿ ಗಾರೆ ಕೆಲಸ ಮಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಕೆಲಸದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಟಿಂಗ್ ಮಷೀನ್‌ನ ಬ್ಲೆಡ್(Cutting Machine Blade) ಕುತ್ತಿಗೆಗೆ ತಾಗಿ ರಾಘವೇಂದ್ರ ಅವರಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮೃತ ರಾಘವೇಂದ್ರ ಅವರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಹೊನ್ನಾವರ ಪೊಲೀಸ್ ಠಾಣಾ(Honnavar Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
