ಉಡುಪಿ(Udupi) : ವೆಂಟೆಡ್ ಡ್ಯಾಮ್ ನಲ್ಲಿ ಈಜಲು ಹೋದ ಇಬ್ಬರು ಸ್ನೇಹಿತರು ಸಾವನ್ನಪ್ಪಿದ ಘಟನೆ ಭಾನುವಾರ(Sunday) ಸಂಭವಿಸಿದೆ.

ಕುಂದಾಪುರ(Kundapura) ತಾಲೂಕಿನ ಬೆಳ್ವೆ ಡ್ಯಾಂ(Belve Dam) ನಲ್ಲಿ ಘಟನೆ ನಡೆದಿದೆ. ಶ್ರೀಶ ಆಚಾರಿ ( 13 ), ಜಯಂತ ನಾಯ್ಕ ( 19 ) ಮೃತ ದುರ್ದೈವಿಗಳಾಗಿದ್ದಾರೆ. ಭಾನುವಾರ ರಜೆ ದಿನ ಇಬ್ಬರು ಈಜಲು ತೆರಳಿದಾಗ ಘಟನೆ ನಡೆದಿದೆ.

ಘಟನಾ ಸ್ಥಳಕ್ಕೆ ಶಂಕರನಾರಾಯಣ ಠಾಣಾ ಪೋಲಿಸರು(Shankaranarayana Police Station) ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.