ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಕಾರವಾರ(Karwar) : ಇವತ್ತುಹಣಮಾಡುವವರು ವಾಮ ಮಾರ್ಗದಲ್ಲಿ ಜನರಿಗೆ ಭಯಪಡಿಸುತ್ತಾ ಲಕ್ಷ, ಕೋಟಿ ರೂಪಾಯಿಯನ್ನ ಯಾಮಾರಿಸುತ್ತಲೇ ಇದ್ದಾರೆ. ಎಲ್ಐಸಿ ಏಜೆಂಟರೊಬ್ಬರು(LIC Agent) ತಮ್ಮ ಖಾತೆಯಲ್ಲಿದ್ದ ಕೋಟಿಗಟ್ಟಲೆ ಹಣವನ್ನ ಕಳೆದುಕೊಂಡು ಇದೀಗ ಪೊಲೀಸ್ ಠಾಣೆ(Police Station) ಮೆಟ್ಟಿಲೇರಿದ್ದಾರೆ.
ಮುಂಬಯಿ ಕ್ರೈಂ ಬ್ರಾಂಚ್(Mumbai Crime Branch) ಹೆಸರಿನಲ್ಲಿ ‘ಡಿಜಿಟಲ್ ಅರೆಸ್ಟ್'(Digital Arrest) ನೆಪದಲ್ಲಿ ಬ್ಯಾಂಕ್ ಠೇವಣಿಯೂ(Bank Deposit) ಬಿಡದೆ ಬರೋಬ್ಬರಿ 1.74 ಕೋಟಿ ರೂ. ವಂಚಿಸಲಾಗಿದೆ.
ಉತ್ತರಕನ್ನಡ(Uttarakannada) ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಮ್ಮಚಗಿಯ(Yallapur Taluku Ummachagi) ಶಿವಾನಂದ ಹೆಗಡೆ (69) ಹೆಸರಿನಲ್ಲಿ ಹಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಕಾರವಾರದ ಸೈಬರ್ ಅಪರಾಧ ಠಾಣೆಯಲ್ಲಿ(Karwar Cyber Crime Station) ಪ್ರಕರಣ ದಾಖಲಾಗಿದೆ.
ಕೃಷಿಕರಾಗಿರುವ ಶಿವಾನಂದ ಅವರನ್ನು ಆಗುಂತಕರು ನಾಲ್ಕು ದಿನಗಳಲ್ಲಿಯೇ ಬೆದರಿಸಿ ಹಣ ವಂಚಿಸಿದ್ದಾರೆ. ಶಿವಾನಂದ ಹೆಗಡೆ ಅವರಿಗೆ ಏ. 21 ರಂದು ಮೊಬೈಲ್ ನಂಬರ್ +917502502510 ನಿಂದ ಕರೆ ಮಾಡಿದ ವಂಚಕರು ತಮ್ಮನ್ನು ಮುಂಬೈ ಪೊಲೀಸ್ ಹೆಡ್ಕ್ವಾರ್ಟಸ್ ಅಧಿಕಾರಿಗಳು(Mumbai Police headquarters Officers) ಎಂದು ಹೇಳಿಕೊಂಡಿದ್ದಾರೆ. ‘ಯಾರೋ ಉಗ್ರರು(Terrorist) ನಿಮ್ಮ ಹೆಸರಿನ ಆಧಾರ ಕಾರ್ಡ್(Adhar Card) ಬಳಸಿಕೊಂಡು ಕೆನರಾ ಬ್ಯಾಂಕಿನಲ್ಲಿ ಖಾತೆ(Canara Bank Account) ತೆರೆದು ಅದರಿಂದ ಕೋಟ್ಯಂತರ ರೂ. ಅವ್ಯವಹಾರ ನಡೆಸಿದ್ದಾರೆ. ಹಾಗಾಗಿ ನಿಮ್ಮ ಹೆಸರಿನಲ್ಲಿರುವ ಬ್ಯಾಂಕ್ ಖಾತೆಯ ಮೇಲೆ ಮನಿ ಲಾಂಡ್ರಿಂಗ್(Money Laundering) ನಡೆಸಿದ ಬಗ್ಗೆ ಮುಂಬೈ ಕ್ರೈಂ ಬ್ರಾಂಚ್ ನಲ್ಲಿ ಎಫ್ಐಆರ್(Crime Branch FIR) ದಾಖಲಾಗಿದೆ’ ಎಂದು ಹೇಳಿದ್ದಾರೆ.
ನಂತರ ಅವರ ಹೆಸರಿರುವ ಕೆನರಾ ಬ್ಯಾಂಕ್ ಎ.ಟಿ.ಎಂ(Canara Bank ATM) ಕಾರ್ಡನ್ನು ವಾಟ್ಸಪ್ ಮುಖಾಂತರ ಕಳುಹಿಸಿ, ಅರೆಸ್ಟ್ ಮಾಡಿಕೊಂಡು ಹೋಗುವುದಾಗಿ ಬೆದರಿಸಿದ್ದಾರೆ. ಹೆದರಿದ ಶಿವಾನಂದ ಹೆಗಡೆ ಅವರು, ತಾನು ಯಾವುದೇ ತಪ್ಪು ಮಾಡಿಲ್ಲಾ ಎಂದು ಗೋಗರೆದಿದ್ದಾರೆ. ಆಗ ವಂಚಕರು ‘ನಮ್ಮ ಹಿರಿಯ ಅಧಿಕಾರಿ ನಿಮಗೆ ಕರೆ ಮಾಡುತ್ತಾರೆ. ನೀವು ಅವರೊಂದಿಗೆ ಮಾತನಾಡಿ. ಅವರೇ ನಿಮಗೆ ಪರಿಹಾರ ಸೂಚಿಸಬಹುದು’ ಎಂದು ಹೇಳಿ ಪೋನ್ ಇಟ್ಟಿದ್ದಾರೆ.
ಐಪಿಎಸ್ ಅಧಿಕಾರಿ(IPS Officer) ಎಂದು ಹೇಳಿಕೊಂಡು ಪೋಲಿಸ್ ಸಮವಸ್ತ್ರ ಧರಿಸಿದ್ದ ಇನ್ನೊಬ್ಬ ಅದೇ +917502502510 ನಂಬರ್ ನಿಂದ ವಿಡಿಯೋ ಕಾಲ್ ಮಾಡಿ ‘ನಾವು ನಿಮಗೆ ಡಿಜಿಟಲ್ ಅರೆಸ್ಟ್(Digital Arrest) ಮಾಡುತ್ತಿದ್ದೇವೆ. ನೀವು ನಿಮ್ಮ ಖಾತೆಯಲ್ಲಿರುವ ಹಣವನ್ನು ರಿಸರ್ವ್ ಬ್ಯಾಂಕ್ಗೆ(Reserve Bank) ಜಮಾ ಮಾಡಬೇಕು. ನೀವು ಅವ್ಯವಹಾರದಲ್ಲಿ ಭಾಗಿಯಾಗಿಲ್ಲ ಎಂದು ಕಂಡು ಬಂದರೆ ಹಣವನ್ನು ಮರಳಿ ನಿಮ್ಮ ಖಾತೆಗೆ ಜಮಾ ಮಾಡುತ್ತೇವೆ’ ಎಂದು ಎಚ್ಚರಿಸಿದ್ದಾನೆ. ಅಲ್ಲದೆ, ‘ಈ ವಿಷಯದ ಬಗ್ಗೆ ಯಾರಲ್ಲಿಯೂ ಚರ್ಚಿಸಿದರೆ ಅರೆಸ್ಟ್(Arrest) ಮಾಡಿಕೊಂಡು ಹೋಗುತ್ತೇವೆ’ ಎಂದು ಬೆದರಿಸಿದ್ದಾರೆ.
ನಂತರ ತನಿಖಾಧಿಕಾರಿ(Investigation Officer) ಹೆಸರಿನಲ್ಲಿ ಮತ್ತೊಬ್ಬ ವಿಡಿಯೋ ಕಾಲ್(Video Call) ಮಾಡಿ, ‘ಕೂಡಲೇ ಹಣವನ್ನು ವರ್ಗಾವಣೆ(Money Transfer) ಮಾಡುವಂತೆ ತಿಳಿಸಿದ್ದಾನೆ’. ಗಾಬರಿಗೊಂಡ ಶಿವಾನಂದ ಅವರು ‘ಹಣವೆಲ್ಲ ಠೇವಣಿ ಇಟ್ಟಿದ್ದೇನೆ. ತೆಗೆಯಲು ಸಮಯ ಬೇಕು’ ಎಂದು ಕೋರಿದ್ದಾರೆ. ಅದಕ್ಕೆ ವಂಚಕರು ‘ಹಣ ವರ್ಗಾವಣೆ ಮಾಡುವವರೆಗೆ ಪ್ರತಿ ದಿನದ ಲೊಕೇಶನ್(Location) ಹಾಗೂ ಫೋಟೊವನ್ನು ತಮಗೆ ವಾಟ್ಸಾಪ್(Whatsapp) ಮಾಡಬೇಕು’ ಎಂದು ಎಚ್ಚರಿಸಿದ್ದಾರೆ. ಇದೆಲ್ಲವನ್ನು ಸತ್ಯ ಎಂದು ನಂಬಿದ ಶಿವಾನಂದ ಹೆಗಡೆ ಏ.24ರವರೆಗೆ ಒಟ್ಟು 1,74,50,000 ರೂ. ಅವರಿಗೆ ಟ್ರಾನ್ಸಪರ್ ಮಾಡಿದ್ದಾರೆ. ಇದೀಗ ತಾವು ಮೋಸ ಹೋದ ಬಗ್ಗೆ ಕಾರವಾರದ ಸೈಬರ್ ಕ್ರೈಂ ಠಾಣೆಯಲ್ಲಿ(Karwar Cyber Crime Station) ದೂರು ದಾಖಲಿಸಿದ್ದಾರೆ.
ಇದನ್ನು ಓದಿ : ಪ್ರೀತಿಸಿ ಮದುವೆಯಾದ ದಂಪತಿಗೆ ಇಬ್ಬರು ಮಕ್ಕಳು. ಕೌನ್ಸಿಲಿಂಗ್ ಗೆ ಬಂದು ಠಾಣೆಯಲ್ಲಿಯೇ ಬಿಟ್ಟು ಅನಾಥ.
