ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಭಟ್ಕಳ(Bhatkal) : ರಾಷ್ಟ್ರೀಯ ಹೆದ್ದಾರಿ 66 ಮುರ್ಡೇಶ್ವರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Terrible Road Accident) ಮಾಜಿ ಸೈನಿಕರೊಬ್ಬರು(ex Soldier) ಮೃತಪಟ್ಟ ಘಟನೆ ನಡೆದಿದೆ. ಮೂವರು ಗಾಯಗೊಂಡಿದ್ದಾರೆ.
ಕೇರಳ ಮೂಲದ(Keral Native) ಸಾಗರನಾಥ್ (40) ಮೃತ ದುರ್ದೈವಿ. ಮೃತರು ಮಾಜಿ ಸೈನಿಕರೆಂದು ಬಂದಿದೆ. ಮುರ್ಡೇಶ್ವರ ರೈಲ್ವೆ ನಿಲ್ದಾಣದ(Murdeshwar Railway Station) ಎದುರು ಈ ದುರ್ಘಟನೆ ಸಂಭವಿಸಿದೆ.
ಕೇರಳದಿಂದ ಮುರ್ಡೇಶ್ವರಕ್ಕೆ(Keral to Murdeshwar) ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ(Electric Pole) ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ಇನ್ನೂ ಮೂವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಮುರ್ಡೇಶ್ವರ ಠಾಣೆಯ(Murdeshwar Station) ಪಿಎಸ್ಐ ಹನುಮಂತ ಭಿರಾದಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನು ಓದಿ : ಬಾರಿ ಕಳ್ಳತನ ಪ್ರಕರಣ ಭೇದಿಸಿದ ಬೈಂದೂರು ಪೊಲೀಸರು.
