ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar): ಎರಡನೇ ಮದುವೆಯಾದನೆಂಬ  ಕಾರಣಕ್ಕೆ ಗಂಡನನ್ನ ಕೊಲೆ ಮಾಡಿದ ಪತ್ನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಭಟ್ಕಳದ ರೇಷ್ಮಾ ಖಾನಮ್ ಶಿಕ್ಷೆಗೊಳಗಾದ ಮಹಿಳೆ. ಭಟ್ಕಳ ತಾಲೂಕಿನ(Bhatkal Taluku) ಮೌಲಾನಾ ಆಜಾದ್ ರಸ್ತೆಯ ಅಬ್ದುಲ್ ನಾಸಿರ್ ಕೊಲೆಯಾದ ಪತಿ. 2017 ರ ಫೆ.17 ರಂದು ಘಟನೆ ನಡೆದಿತ್ತು. ಪತಿಗೆ ನಿದ್ರೆ ಮಾತ್ರೆ ತಿನ್ನಿಸಿ ಮಲಗಿಸಿದ ಪತ್ನಿ ನಂತರ ವೇಲ್‌ನಿಂದ ಆತನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಳು. ನಂತರ ಮಲಗಿದಲ್ಲೇ ಆತ ಮೃತಪಟ್ಟಿದ್ದಾನೆ ಎಂದು ನಾಟಕವಾಡಿದ್ದಳು. ವಾಷಿಂಗ್ ಮಷಿನ್‌ಗೆ ಹಾಕಿ ಕೊಲೆ ಮಾಡಲು ಬಳಸಿ  ವೇಲ್‌ನ್ನು ತೊಳೆದು, ಸಾಕ್ಷ್ ವನ್ನು ನಾಶಪಡಿಸಿದ್ದಳು. 

ಆಕೆಯ ವರ್ತನೆಯಿಂದ ಅನುಮಾನಗೊಂಡಿದ್ದ ಮೃತರ ಸಹೋದರನ ಪುತ್ರ ಭಟ್ಕಳ ಶಹರ ಪೊಲೀಸ್ ಠಾಣೆಗೆ(Bhatkal Town Station) ದೂರು ನೀಡಿದ್ದ. ತನಿಖೆ ನಡೆಸಿದ ಶಹರ ಠಾಣೆ ಪೊಲೀಸರು ರೇಷ್ಮಾಳನ್ನು ಬಂಧಿಸಿ ವಿಚಾರಣೆ ನಡೆಸಿ, ಸಾಕ್ಷ್ಯಗಳನ್ನು ಕಲೆ ಹಾಕಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಅವರು, ಅಪರಾಧ ಸಾಬೀತಾದ ಕಾರಣ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಜತೆಗೆ ಆರು ಸಾವಿರ ರೂ. ದಂಡ ತುಂಬುವಂತೆ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ಇದನ್ನು ಓದಿ: ಪುಟಾಣಿಗಳಿಂದ ಸ್ಕೆಟಿಂಗ್ ಮೂಲಕ ಶ್ರದ್ಧಾಂಜಲಿ. ನಮ್ಮ ಸೇನಾಪಡೆ ತಕ್ಕ ಉತ್ತರ ನೀಡಲಿದೆ : ಶಾಸಕ ಸೈಲ್.

ಕಾಳಿ ನದಿಯಲ್ಲಿ ಸ್ನಾನಕ್ಕಿಳಿದ ಯುವಕನ ಸಾವು.