ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಕಾರವಾರ(Karwar) : ರಾಜ್ಯದ ಕರಾವಳಿ(State Coastal) ಸೇರಿದಂತೆ ಕೇರಳ(Keral) ಹಾಗೂ ಲಕ್ಷದ್ವೀಪ ಸಮುದ್ರ ಪ್ರದೇಶಗಳಲ್ಲಿ(Lakshadeep Sea Area) ಮೇ 17 ಮತ್ತು 18 ರಂದು ಭಾರೀ ಗಾಳಿ(Heavy Wind) ಹಾಗೂ ಅಲೆಗಳ(Waves) ಅಬ್ಬರ ಹೆಚ್ಚಾಗುವ ಸಾಧ್ಯತೆಯ ಬಗ್ಗೆ ಭಾರತೀಯ ಹವಾಮಾನ ಇಲಾಖೆ(Indian Metrology Department) ಮೀನುಗಾರರಿಗೆ ಎಚ್ಚರಿಕೆ ನೀಡಿದೆ.
ಎರಡು ದಿನಗಳವರೆಗೆ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಬಹುದು. ಕೆಲವೆಡೆ ಗಾಳಿಯ ವೇಗ 60 ಕಿ.ಮೀ ವರೆಗೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಕರ್ನಾಟಕ ಕರಾವಳಿ ಭಾಗದ ಮೀನುಗಾರರು(Karnataka Coastal Fishermen) ಸಮುದ್ರಕ್ಕೆ ಇಳಿಯಬಾರದು ಎಂದು ಭಾರತೀಯ ಹವಮಾನ ಇಲಾಖೆ ಸೂಚನೆ ನೀಡಿದೆ.
