ಇ ಸಮಾಚಾರ ಡಿಜಿಟಲ್ನ್ಯೂಸ್ (esamachara digital news): ಕಾರವಾರ(Karwar) : ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಸ್ನೋಟಿಯಲ್ಲಿ(Asnoti) ಮದ್ಯದ ಅಮಲಿನಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ನಡೆದಿದೆ.
ಗುಜರಾತ್ ಮೂಲದ ಕಾರ್ಮಿಕ(Gujarat Native Labour) ದೆವೇಶ ರಾಥೋಡ್ (28) ಕೊಲೆಯಾದ ದುರ್ದೈವಿ. ಕಟ್ಟಡ ನಿರ್ಮಾಣ ಕೆಲಸಕ್ಕಾಗಿ ಕಾರವಾರಕ್ಕೆ ಬಂದಿದ್ದ ದೆವೇಶ, ಸ್ನೇಹಿತರೊಂದಿಗೆ ಇದ್ದ ವೇಳೆ ಕ್ಷುಲ್ಲಕ ವಿಚಾರಕ್ಕೆ ಜಗಳ ಉಂಟಾಗಿದೆ ಎನ್ನಲಾಗಿದೆ.
ಶನಿವಾರ ಮುಂಜಾನೆ ಸುಮಾರು 1 ಗಂಟೆ ಸುಮಾರಿಗೆ ಅಸ್ನೋಟಿಯ ಸಾವಂತವಾಡಾದ(Asnoti Sawantawada) ಮನೆಯಲ್ಲಿ ಮದ್ಯದ ಅಮಲಿನಲ್ಲಿದ್ದ ವೇಳೆ ಮಾತಿನ ಚಕಮಕಿ ನಡೆದಿದ್ದು, ಅದು ಹೊಡೆದಾಟಕ್ಕೆ ತಿರುಗಿದೆ. ಈ ವೇಳೆ ದೆವೇಶ ರಾಥೋಡ್ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಮೂಲದ(Bagalakote Native) ಶಿವಾನಂದ ಸಿಂಧೂರಪ್ಪಾ ನಾಯ್ಕರ (45) ಹಾಗೂ ಹಾವೇರಿ ಜಿಲ್ಲೆಯ(Haveri District) ಮರಿಯಪ್ಪ ಮಾದೇವಪ್ಪ ಹರಿಜನ (43) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿತರು ಕಟ್ಟಡ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಕಮಲಾಕರ ಶಂಕರ ಗಡಕರ (64) ಎಂಬುವವರು ನೀಡಿದ ದೂರಿನ ಮೇರೆಗೆ ಕಾರವಾರದ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ(Chittakula Police Station) ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
