ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ತಾಲೂಕಿನ ವೆಂಕಟಾಪುರ ನದಿಯಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಕುಟುಂಬಗಳ ನೆರವಿಗೆ ಸಚಿವ ಮಂಕಾಳ ವೈದ್ಯ ಮಾನವೀಯತೆ ಮೆರೆದಿದ್ದಾರೆ. ತಮ್ಮ ಇಲಾಖೆಯ ವತಿಯಿಂದ ರೂ 10 ಲಕ್ಷ ರೂ. ಹಣವನ್ನು ಹೆಚ್ಚುವರಿ ಪರಿಹಾರವಾಗಿ ನೀಡಿದ್ದಾರೆ.
ದುರಂತದಲ್ಲಿ ಕುಟುಂಬದ ಆಧಾರಸ್ತಂಭಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಶುಕ್ರವಾರ ಪರಿಹಾರದ ಚೆಕ್ ವಿತರಿಸಲಾಯಿತು. ಸಚಿವರಾಗಿದ್ದ ಮಂಕಾಳ ವೈದ್ಯ, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಪಡುಶಿರಾಲಿಯ ಸಂತ್ರಸ್ಥ ಮನೆಗೆ ಆಗಮಿಸಿ ಸರ್ಕಾರದ ಐದು ಲಕ್ಷ, ಮೀನುಗಾರಿಕೆ ಇಲಾಖೆಯ 10 ಲಕ್ಷ, ವಯಕ್ತಿಕ ಒಂದು ಲಕ್ಷ, ಜನತಾ ಬ್ಯಾಂಕ್ ನಿಂದ 50 ಸಾವಿರ ರೂ. ಹಣವನ್ನು ಕುಟುಂಬಗಳಿಗೆ ನೀಡಲಾಯಿತು. ಇದೇ ವೇಳೆ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಮೇ 24ರಂದು ತಟ್ಟಿಹಕ್ಕಲ್ ಸಮೀಪದ ವೆಂಕಟಾಪುರ ನದಿಯಲ್ಲಿ ಮುಳುಗಿ 11 ಜನರು ಪ್ರಾಣ ಕಳೆದುಕೊಂಡಿದ್ದರು. ಬದುಕಿನ ಸಂಕಷ್ಟದ ನಡುವೆ ಸರ್ಕಾರ ಮತ್ತು ಸಮಾಜ ಸಂತ್ರಸ್ತ ಕುಟುಂಬಗಳ ಜೊತೆ ನಿಲ್ಲಬೇಕಾಗಿದ್ದು ಇದಕ್ಕೆ ತಾವು ಬದ್ದರಿದ್ದೆವೆ.
ಮೃತರ ಮಕ್ಕಳ ಶಿಕ್ಷಣ, ಉದ್ಯೋಗ, ಕುಟುಂಬದ ಭವಿಷ್ಯದ ಕುರಿತು ವಿಶೇಷ ಗಮನ ಹರಿಸಲಾಗುವುದು. ಅನಾಥ ಮಕ್ಕಳಿಗೆ ಅಗತ್ಯವಿರುವ ಎಲ್ಲ ಸಹಕಾರ ಒದಗಿಸಲಾಗುವುದು ಎಂದು ಮಂಕಾಳ ವೈದ್ಯ ಹೇಳಿದ್ದಾರೆ.
ಅಲ್ಲದೇ ಲಕ್ಷ್ಮೀ ಶಿವರಾಮ ನಾಯ್ಕ ಅವರ ಅನಾಥ ಮಕ್ಕಳ ಪರಿಸ್ಥಿತಿ ಕಂಡು ಮರುಗಿದ ಮಂಕಾಳ ವೈದ್ಯ ವಯಕ್ತಿಕ ಐದು ಲಕ್ಷ ರೂ ಮನೆ ನಿರ್ಮಿಸಲು ನೀಡಿದರು. ಜೂನ್ ಐದರಂದು ತಮ್ಮ ಹುಟ್ಟು ಹಬ್ಬದ ದಿನವೇ ಮನೆಗೆ ಅಡಿಪಾಯ ಹಾಕುವುದಾಗಿ ಈ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.
ಈ ವೇಳೆ ನಾಮಧಾರಿ ಸಮುದಾಯದ ಸುಬ್ರಾಯ ನಾಯ್ಕ,ವೆಂಕಟೇಶ ನಾಯ್ಕ, ಸುಬ್ರಾಯ ನಾಯ್ಕ, ಆಸರಕೇರಿ ಕೃಷ್ಣ ನಾಯ್ಕ, ವೆಂಕಟಯ್ಯ ಭೈರುಮನೆ, ಪ್ರಥ್ವಿ ಕೃಷ್ಣ ನಾಯ್ಕ ಸೇರಿದಂತೆ ಇತರರು ಇದ್ದರು.
ಇದನ್ನು ಓದಿ : ಜೋಯಿಡಾ ತಿನೆಘಾಟ್‌ನಲ್ಲಿ ಭೀಕರ ರಸ್ತೆ ಅಪಘಾತ : ಇಬ್ಬರು ಸಾವು, ಮೂವರಿಗೆ ಗಂಭೀರ ಗಾಯ
