ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangalore) : ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಉಂಟಾಗಿದೆ. ನೂತನ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್(D K Shivakumar) ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಕೆಪಿಸಿಸಿ(KPCC) ನೂತನ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್(MLC B K Hariprasad) ಅವರನ್ನ ಆಯ್ಕೆ ಮಾಡಲಾಗಿದೆ.
ಕಾಂಗ್ರೆಸ್ ಹೈಕಮಾಂಡ್(Congress Hicommand) ಅತ್ಯಂತ ಪ್ರಮುಖವಾದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷ ಪಟ್ಟವನ್ನು ಹರಿಪ್ರಸಾದ್ ಅವರಿಗೆ ನೀಡಿದ್ದು ರಾಜ್ಯ ಸಂಘಟನೆಯ ಚುಕ್ಕಾಣಿ ವಹಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಅತ್ಯಂತ ನಿಷ್ಠಾವಂತ, ಶಿಸ್ತಿನ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹಿರಿಯ ರಾಜಕಾರಣಿ ಬಿ ಕೆ ಹರಿಪ್ರಸಾದ್(Senior Politicians B K Hariprasad). ಕರಾವಳಿ ಮೂಲದ(Karavali Native) ಬಿಲ್ಲವ ಸಮುದಾಯದ(Billava Community) ವ್ಯಕ್ತಿ. ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್(Congress) ಸೈದ್ಧಾಂತಿಕ ಹಿನ್ನೆಲೆಯಲ್ಲಿ ಬೆಳೆದ ಬಿಕೆ ಹರಿಪ್ರಸಾದ್(B K Hariprasad) ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) ಪ್ರಧಾನ ಕಾರ್ಯದರ್ಶಿಯಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಪಕ್ಷವನ್ನು ಮುನ್ನಡೆಸಿದ ಸುದೀರ್ಘ ರಾಜಕೀಯ ಅನುಭವ ಹೊಂದಿದ್ದಾರೆ.
ಗಾಂಧಿ ಕುಟುಂಬ(Gandhi Family) ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(AICC President Mallikarjun Kharge) ಅವರ ಅತ್ಯಂತ ನಂಬಿಕಸ್ಥ ನಾಯಕರಲ್ಲಿ ಹರಿಪ್ರಸಾದ್ ಒಬ್ಬರು. ಪಕ್ಷದ ಆಂತರಿಕ ವಿದ್ಯಮಾನಗಳನ್ನು ನಿಭಾಯಿಸುವಲ್ಲಿ ಸೈ ಅನಿಸಿಕೊಂಡವರು.
ಡಿ ಕೆ ಶಿವಕುಮಾರ್(D K Shivakumar) ಅವರ ಸಚಿವ ಸಂಪುಟದಲ್ಲಿ ಹರಿಪ್ರಸಾದ್ ಅವರಿಗೆ ಸ್ಥಾನ ಸಿಗುವುದೆಂದು ಭಾವಿಸಲಾಗಿತ್ತು. ಆದ್ರೆ ಸಿಗಲಿಲ್ಲ. ಹೀಗಾಗಿ ಕರಾವಳಿ ಭಾಗ(Coastal part) ಹಾಗೂ ಹಿಂದುಳಿದ ವರ್ಗಗಳಲ್ಲಿ (OBC) ಅಸಮಾಧಾನ ಉಂಟಾಗಿತ್ತು. ಹೀಗಾಗಿ . ಅಸಮಧಾನ ಶಮನ ಮಾಡುವ ಕಾರಣಕ್ಕಾಗಿ ಹೈಕಮಾಂಡ್ ಮಹತ್ವದ ಜವಾಬ್ದಾರಿ ನೀಡಿದೆ.
ಬಿ ಕೆ ಹರಿಪ್ರಸಾದ್(B K Hariprasad) ಅವರ ಆಯ್ಕೆಯಿಂದ ಕರಾವಳಿ(Karavali) ಮತ್ತು ಮಲೆನಾಡು(Malenadu) ಭಾಗದಲ್ಲಿ ಅತ್ಯಂತ ನಿರ್ಣಾಯಕವಾಗಿರುವ ಬಿಲ್ಲವ/ಈಡಿಗ/ನಾಮಧಾರಿ ಸಮುದಾಯವನ್ನ ಒಗ್ಗೂಡಿಸಿ ಕರಾವಳಿಯಲ್ಲಿ ಕಾಂಗ್ರೆಸ್ ಮರಳಿ ಗಟ್ಟಿಗೊಳಿಸುವ ತಂತ್ರವಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷಕ್ಕೆ ಪ್ಲಸ್ ಆಗುವ ಸಾಧ್ಯತೆ ಇದೆ.
ಬಿಕೆ ಹರಿಪ್ರಸಾದ್(BK Hariprasad) ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿರುವ ಜೊತೆಗೆ ವಿಧಾನ ಸಭೆಯಿಂದ ವಿಧಾನ ಪರಿಷತ್ಗೆ ಆಯ್ಕೆಯಾಗುವ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಸೂಚಿಸಲಾಗಿದ್ದು, ಈ ಪೈಕಿ ಬಿಕೆ ಹರಿಪ್ರಸಾದ್ ಅವರಿಗೆ ಕೂಡ ಟಿಕೆಟ್ ನೀಡಲಾಗಿದೆ. ಒಟ್ಟಿನಲ್ಲಿ ಬಿ.ಕೆ. ಹರಿಪ್ರಸಾದ್ ಅವರಿಗೆ ಕೆಪಿಸಿಸಿ(KPCC) ಅಧ್ಯಕ್ಷ ಸ್ಥಾನ ನೀಡಿದ್ದು ಕಾಂಗ್ರೆಸ್ ಹೈಕಮಾಂಡ್ನ ಅತ್ಯಂತ ಚಾಣಾಕ್ಷ ನಡೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : ಉಚಿತ ಬಸ್ ಪಾಸ್ ಸೇರಿ ಆರು ನಿರ್ಧಾರ ಘೋಷಿಸಿದ ಸಿಎಂ ಡಿ ಕೆ ಶಿವಕುಮಾರ್.
