ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ವಿಜಯಪುರ : ರಾಜ್ಯದ ಮೂರು ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳ ಸೋಲು ಖಂಡಿಸಿ ಬಿಜೆಪಿ ಕಾರ್ಯಕರ್ತನೋರ್ವ ತಮ್ಮ ಮನೆಯ ಟಿವಿ ಒಡೆದು ಹಾಕಿದ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯ ಕೋಲ್ಹಾರ ಪಟ್ಟಣದ ಬಿಜೆಪಿ ಅಭಿಮಾನಿ ವೀರಭದ್ರಪ್ಪ ಅವರು ಉಪಚುನಾವಣೆ ಸೋಲಿನಿಂದಾಗಿ ಬೇಸತ್ತು ಮನೆಯಲ್ಲಿದ್ದ ಟಿವಿಯನ್ನು ಹೊರಗೆ ತಂದು ರಸ್ತೆಗೆ ಎಸೆದಿದ್ದಾರೆ. ಬಳಿಕ ಟಿವಿಗೆ ಕಲ್ಲಿನಿಂದ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದು, ಪ್ರಧಾನಿ ಮೋದಿ ಅವರು ರಾಜ್ಯದ ಬಿಜೆಪಿ ಮುಖಂಡರ ಸಭೆ ತೆಗೆದುಕೊಳ್ಳಬೇಕು. ರಾಜ್ಯ ಬಿಜೆಪಿಯಲ್ಲಿ ಒಗ್ಗಟ್ಟಿಲ್ಲದ ಕಾರಣ ಕಾರ್ಯಕರ್ತರು ಬಲಿಪಶುವಾಗುತ್ತಿದ್ದಾರೆ. ಬಿಜೆಪಿಯಲ್ಲಿನ ಎಲ್ಲಾ ನಾಯಕರು ಒಗ್ಗಟ್ಟಾಗಬೇಕಿದೆ. ಇಲ್ಲಂದರೆ ಲೀಡರ್ ಗಳ ಕೈಲಿ ಕಾರ್ಯಕರ್ತರು ಸಿಕ್ಕು ಬಲಿಯಾಗುತ್ತಾರೆ. ಬಸವನಗೌಡ ಪಾಟೀಲ್ ಯತ್ನಾಳ ಒಂದು ಕಡೆ, ವಿಜಯೇಂದ್ರ ಒಂದು ಕಡೆ ಹೋಗುತ್ತಾರೆ. ಇವರನ್ನೇ ಮೂರ್ನಾಲ್ಕು ಭಾಗವಾದರೆ ಹೇಗೆ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ. ನಾಯಕರಲ್ಲಿ ಒಗ್ಗಟ್ಟಿಲ್ಲದೇ ಇರುವುದರಿಂದ ಮೂರು ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ ಎಂದು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.
ಇದನ್ನು ಓದಿ : ಇಬ್ಬರು ಮಾಜಿ ಸಿಎಂ ಗಳ ಪ್ಲ್ಯಾನ್ ಪ್ಲಾಪ್.
ಅಳ್ವೆಕೋಡಿ ಮೀನುಗಾರಿಕಾ ಸಂಘಕ್ಕೆ ಪ್ರಶಸ್ತಿ.
ನೇತ್ರಾಣಿಗೆ ಜಾಲಿ ಟ್ರಿಪ್ ಮಾಡಿದ ಡಿಕೆ ಶಿವಕುಮಾರ್