ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಟೆಂಟ್ ಗೆ ಹಾಕಿದ್ದ ತಗಡಿನ ಶೀಟ್ ತೆಗೆಯುವ ವೇಳೆ ವಿದ್ಯುತ್ ಹರಿದು ಕಾರ್ಮಿಕನೋರ್ವ(Labour) ಸಾವನ್ನಪ್ಪಿದ ಘಟನೆ ನ್ಯೂ ಕೆ.ಎಚ್. ಬಿ ಕಾಲೋನಿಯಲ್ಲಿ(New KHB Colony) ಸಂಭವಿಸಿದೆ.
ಹಬ್ಬುವಾಡಾದ ಜ್ಞಾನೇಶ್ವರಿ ಸ್ಕೂಲ್(Habbuwada Jnaneshwari School) ಹತ್ತಿರ ಇರುವ ರಾಜು ರಾಯ್ಕರ ಎಂಬುವವರ ಮನೆಯ ಗೃಹ ಪ್ರವೇಶಕ್ಕೆ ಹಾಕಿದ ಟೆಂಟ್ ತೆಗೆಯುವ ವೇಳೆ ಅವಘಡ ಸಂಭವಿಸಿದೆ.
ಕಾರ್ಮಿಕ ಪದ್ಮನಾಭನಗರದ(Padmanabhanagars) ಭರತ ಗೌಡ (30) ಮೃತ ದುರ್ದೈವಿ. ಗುರುವಾರ ಬೆಳಿಗ್ಗೆ ಟೆಂಟ್ ನ ಮೇಲೆ ಹಾಕಿದ ತಗಡಿನ ಶೀಟನ್ನು ತೆಗೆಯುತ್ತಿರುವಾಗ ಟೆಂಟ್ ಇರುವ ಸ್ಥಳದ ಪಕ್ಕದ ಮನೆಯ ಬಾಲಕೃಷ್ಣ ಕುಡಾಳಕರ ಎಂಬುವವರ ಸರ್ವೀಸ್ ತಂತಿಗೆ(Service Line) ತಗಡು ತಗುಲಿ ವಿದ್ಯುತ್ ಹರಿದ ಪರಿಣಾಮವಾಗಿ ಹತ್ತಿದ ಏಣಿಯಿಂದ ಕೆಳಗೆ ಬಿದ್ದು ಭರತ ಮೃತಪಟ್ಟಿದ್ದಾನೆ.
ಇದನ್ನು ಓದಿ : ಹಳಿಯಾಳದಲ್ಲಿ ರೌಡಿ ಅಟ್ಟಹಾಸ ಪ್ರಕರಣ. ನಿರ್ಲಕ್ಷ್ಯಕ್ಕೆ ಪೊಲೀಸರ ತಲೆದಂಡ
