ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಹಳಿಯಾಳ ಪಟ್ಟಣದ ಮೌರ್ಯ ಕ್ಲಬ್(Haliyal Town Mourya Club) ಎದುರು ನಡೆದ ರೌಡಿ ಅಟ್ಟಹಾಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತಲೆದಂಡವಾಗಿದೆ.
ರೌಡಿ ಎನ್ನಲಾದ ಮಂಜುನಾಥ ಬೇಕನಿ ಕುಡಿದ ಮತ್ತಿನಲ್ಲಿ ಸಾರ್ವಜನಿಕರ ಎದುರೇ ರಂಪಾಟ ನಡೆಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಬಂದ ಪೊಲೀಸ್ ಸಿಬ್ಬಂದಿಯ ಮೇಲೆಯೇ ಹಲ್ಲೆ ನಡೆಸಿದ್ದನು. ಅಲ್ಲದೇ ಘಟನೆಯನ್ನು ವಿಡಿಯೋ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿಯ ಮೊಬೈಲ್(Police Mobile) ಎಸೆದು, ಸಮಾಧಾನಪಡಿಸಲು ಬಂದ ಸಿಬ್ಬಂದಿಯನ್ನು ತಳ್ಳಿದ ವಿಡಿಯೋ ವೈರಲ್(Video Viral) ಆಗಿತ್ತು.
ಘಟನೆ ವೇಳೆ ಪೊಲೀಸರು ಅಸಹಾಯಕರಂತೆ ನಿಂತು ನೋಡಿದ ಆರೋಪ ಕೇಳಿಬಂದಿದ್ದು, ಪೊಲೀಸ್ ಜೀಪ್(Police Zeep) ಎದುರು ನಿಂತು ರೌಡಿ ಅಡ್ಡಿಪಡಿಸಿದ ದೃಶ್ಯಗಳು ವೈರಲ್ ಆಗಿದ್ದವು. ಸಾರ್ವಜನಿಕರ ಎದುರೇ ರೌಡಿಗೆ ಪೊಲೀಸರು ಶರಣಾದಂತ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಪ್ರಕರಣ ಪೊಲೀಸ್ ಇಲಾಖೆಯ(Police Department) ಘನತೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್(SP Deepan) ಅವರಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಪಿಎಸ್ಐ ಬಸವರಾಜ್ ಮಬನೂರು(PSI Basavaraj Mabanooru) ಅವರನ್ನು ಅಮಾನತು(Suspended) ಮಾಡಲಾಗಿದ್ದು, ಎಂಟು ಮಂದಿ ಕಾನಸ್ಟೇಬಲ್ಗಳನ್ನು ವರ್ಗಾವಣೆ(Constable Transfer’s) ಮಾಡಲಾಗಿದೆ. ಪೊಲೀಸ್ ಇನ್ಸಪೆಕ್ಟರ್ ಜಯಪಾಟೀಲ್ ಅವರ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ.
ಹಳಿಯಾಳದ ರೌಡಿ(Haliyal Roudi) ಅಟ್ಟಹಾಸ ಪ್ರಕರಣದ ಬಳಿಕ ಪೊಲೀಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದ್ದು, ಕೊನೆಗೂ ಹಿರಿಯ ಅಧಿಕಾರಿಗಳಿಂದ ಕ್ರಮ ಜರುಗಿಸಲಾಗಿದೆ.
ಡಿಕೆ ಶಿವಕುಮಾರ್(DK Shivakumar) ಅವರು ರಾಜ್ಯದ ಮುಖ್ಯಮಂತ್ರಿಯಾಗಿ(Chief Minister) ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ಪೊಲೀಸ್ ಇಲಾಖೆಗೆ(Police Department) ಸೂಚನೆಗಳನ್ನ ನೀಡಿದ್ದಾರೆ. ಅದರಲ್ಲೂ ಮುಖ್ಯವಾಗಿ ರೌಡಿಸಂ ನಿಯಂತ್ರಣಕ್ಕೆ ಸ್ಕ್ವಾಡ್ ರಚಿಸುವಂತೆ ಹೇಳಿದ್ದರು. ಅದರಂತೆ ಇದೀಗ ರಾಜ್ಯಾದ್ಯಂತ ರೌಡಿಸಂ ನಿಯಂತ್ರಣಕ್ಕೆ(Roudism Control) ಗೃಹ ಇಲಾಖೆ(Home Department) ಹೊಸ ಕ್ರಮ ಕೈಗೊಂಡಿದ್ದು, ಈ ಬಗ್ಗೆ ಮಹತ್ವದ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಮಾಜಿ ರೌಡಿಶೀಟರ್ ಮಂಜನ ಹುಚ್ಚಾಟ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಇದನ್ನು ಓದಿ :ಮದುವೆ ಮಾಡಿಸುವವರ ಗಮನಕ್ಕೆ. ಇನ್ಮುಂದೆ ತಡರಾತ್ರಿವರೆಗೂ ಬ್ಯಾಂಡ್ ಹಾಗೂ ಬೆಂಜೊ ತಂಡ ಸಿಗಲ್ಲ.
