ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹಳಿಯಾಳ(Haliyal): ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ(Kalaginakoppa Village) ಸೋಮವಾರ ಬೆಳಗಿನ ಜಾವ ಭಾರೀ ಸ್ಫೋಟ(Blast) ಸಂಭವಿಸಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
ಪಾಳು ಬಿದ್ದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ನಾಡ ಬಾಂಬ್ ಇಲ್ಲವೇ ಜಿಲೆಟಿನ್ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿವೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಹಲವು ಮನೆಗಳಿಗೆ ಹಾನಿಯಾಗಿದ್ದು, ಭಾರೀ ಶಬ್ದದಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪಾಳು ಬಿದ್ದ ಮನೆಯಲ್ಲಿ ನಾಡ ಬಾಂಬ್ ಇಲ್ಲವೇ ಜಿಲೆಟಿನ್ ಗಳನ್ನು ಸಂಗ್ರಹಿಸಿಟ್ಟಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಮನೆಗೆ ಸಂಬಂಧಿಸಿದ ವಾಸು ಕೊರವರ್ ಎಂಬಾತ ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಹಳಿಯಾಳ ಪೊಲೀಸರು(Haliyal Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಫೋಟದ ಕಾರಣ ಹಾಗೂ ನಾಡ ಬಾಂಬ್ ಸಂಗ್ರಹದ ಕುರಿತು ತನಿಖೆ(Investigation) ಆರಂಭಿಸಿದ್ದಾರೆ.
ಇದನ್ನು ಓದಿ : ಪೊಲೀಸರ Actionಗೆ ಕಾರಣನಾಗಿದ್ದ ಮಚ್ ಮಂಜ ಸಾಂಗ್ಲಿಯಲ್ಲಿ Lock.
