ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ರಾಷ್ಟ್ರೀಯ ಹೆದ್ದಾರಿ(National Highway) 52 ರ ಘಟ್ಟ ಪ್ರದೇಶದಲ್ಲಿ ಸುಟ್ಟು ಭಸ್ಮವಾದ ಕಾರು ಮತ್ತು ‌ಅದರೊಳಗಿನ ಡೆಡ್ ಬಾಡಿ ಪತ್ತೆ ಪ್ರಕರಣ ಬೆನ್ನತ್ತಿದ್ದ ಯಲ್ಲಾಪುರ ಪೊಲೀಸರು(Yallapur Police) ಮೂವರು ಆರೋಪಿಗಳಿಗೆ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಯಲ್ಲಾಪುರ ತಾಲೂಕಿನ ಅರಬೈಲ್ ಸಮೀಪದ ತಾಳೆಕುಂಬ್ರಿ(Arebail near Talekumbri) ಬಸ್ ನಿಲ್ದಾಣದ ಬಳಿ ಎಪ್ರಿಲ್ ಎಂಟರ ಬೆಳಿಗ್ಗೆ ಕಾರೊಂದು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.  ಯಲ್ಲಾಪುರ ಪೊಲೀಸರು(Yallapur Police) ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದರು.  ‌ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಅವರು ಸ್ಥಳ ಪರಿಶೀಲನೆ ನಡೆಸಿದ ಬಳಿಕ ಇದೊಂದು ಸಂಶಯಾಸ್ಪದ ಕೇಸ್(Suspect Case) ಎಂಬ ತೀರ್ಮಾನಕ್ಕೆ  ಬಂದಿದ್ದರು.

ಈ ನಡುವೆ ಬೆಳಗಾಂ ರಸ್ತೆಯ(Belagaum Road) ಜಗನ್ನಾಥ ಧಾಪಳೆ ಎಂಬುವವರು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ(Yallapur Police Station) ದೂರು ದಾಖಲಿಸಿ ತಮ್ಮ ಮಗನ ಕಾರು ಎಂದಿದ್ದರು. ಅದರೊಳಗೆ ಇರುವ ಮೃತ ದೇಹ ತಮ್ಮ ಮಗನದ್ದು ಇಲ್ಲವೇ ಬೇರೆಯವರದ್ದಾಗಿರಬಹುದು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿತರಾದ ಸಿದ್ದಾರೂಢ ನಗರ ಹೆಗ್ಗರಿ ಹಳೆ ಹುಬ್ಬಳ್ಳಿಯ(Old Hubli) ಅಬ್ದುಲ್ ನಹೀಮ ಮುಜಾವರ ( 32) , ಮೌಲಾಸಾಬ ಬಾಬಾಜಾನ ಬಾಡ (36 ) ದಾದಾಪೀರ ಅಪ್ತಾಬ್ ಮೆಹಬೂಬಸಾಬ ಬಾಳಸಂಗಿ ( 22 ) ಬಂಧಿತರಾಗಿದ್ದಾರೆ. ಆರೋಪಿತರನ್ನು  ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದೆ.

ನಿತೇಶ ಧಾಪಳೆ ಎಂಬಾತನನ್ನು ಸ್ನೇಹಿತರೇ ಕೊಲೆ ಮಾಡಿ ಕಾರಿನಲ್ಲಿ ಹಾಕಿಕೊಂಡು ಬಂದು ತಾಳೆ ಕುಂಬ್ರಿ ಬಳಿ ಬೆಂಕಿ(Talekumbri Fire) ಹಚ್ಚಿದ್ದರು. ಈ ಸಂದರ್ಭದಲ್ಲಿ ಏಳು ಜನರು ಇದ್ದರು ಮಾಹಿತಿಯನ್ನ ಪೊಲೀಸರು ಕಲೆ ಹಾಕಿದ್ದಾರೆ.

ಶನಿವಾರ ಕಾರವಾರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ(Karwar SP Office) ಪ್ರಕರಣದ ಬಗ್ಗೆ ಮಾಹಿತಿ ನೀಡಿದ  ಎಸ್ಪಿ ದೀಪನ್ ಅವರು  ಪ್ರಕರಣದ ವಿವರಣೆ ನೀಡಿದ್ದಾರೆ. ಕಾರ್ ನಲ್ಲಿದ್ದ ನಿತೇಶ್ ಧಾಪಳೆ ಕೊಲೆಯಾದ ನಂತರ ಅವರನ್ನು ಕಾರ್ ಅಪಘಾತದಲ್ಲಿ ಸತ್ತ ರೀತಿಯಲ್ಲಿ ಬಿಂಬಿಸಲು ಆರೋಪಿಗಳು ಯತ್ನಿಸಿದ್ದಾರೆ ಎಂದರು.

ಈ ಕೊಲೆ ಪ್ರಕರಣದಲ್ಲಿ ಇನ್ನೂ ನಾಲ್ವರು ಭಾಗಿಯಾಗಿದ್ದು ಅವರಿಗಾಗಿ ಹುಡುಕಾಟ ನಡೆದಿದೆ. ಮೊದಲ ಆರೋಪಿ ಅಬ್ದುಲ್ ನಹೀಂ ಕೋರ್ಟ್ ಗೆ ಶರಣಾಗಿದ್ದ. ನಂತರ ಪೊಲೀಸರ ವಶಕ್ಕೆ ಬಂದಿದ್ದಾನೆ. ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ(Yallapur National Highway) ವಾಹನ ಚಲನವಲನ ಮಾಹಿತಿ ಹಿಡಿದು ಪ್ರಕರಣ ಬೇಧಿಸಲು ಸಾಧ್ಯವಾಗಿದೆ.

ಕೊಲೆಯಾದ ನಿತೇಶ್ ಧಾಪಳೆ ಮೇಲೆ ಸಹ 22 ಪ್ರಕರಣಗಳಿವೆ. ಬೆಳಗಾವಿ(Belagavi), ‌ಧಾರವಾಡ(Dharwad)  ಸೇರಿ ಇತರ ಠಾಣೆಗಳಲ್ಲಿ ದರೋಡೆ ಕೇಸ್(Robbery Case) ಇದೆ. ಹುಕ್ಕೇರಿಯ ಪ್ರಕರಣವೊಂದರಲ್ಲಿ  ಅಬ್ದುಲ್ ನಹೀಮ ಮುಜಾವರ ಜೊತೆ ಇದ್ದ ನಿತೇಶ್ ಬಾಗಿಯಾಗಿದ್ದ.   ನಿತೇಶ  ಕಾರ್ ಚಾಲಕನಾಗಿ ನಹೀಮ್ ಇರುತ್ತಿದ್ದ ಪದೇಪದೇ ಚಾಲಕನಾಗಿ ತನ್ನೊಂದಿಗೆ ಇರು ಎನ್ನುತ್ತಿದ್ದ  ನಿತೇಶ್ ನ ಕಿರಿಕಿರಿ ತಾಳಲಾರದೇ   ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಈ  ಕೊಲೆ ಪ್ರಕರಣವನ್ನ ಶಿರಸಿ ಡಿವೈಎಸ್ಪಿ(Sirsi Dysp) ಗೀತಾ ಪಾಟೀಲ್ ಮಾರ್ಗದರ್ಶನದಲ್ಲಿ  ಯಲ್ಲಾಪುರ ಸಿಪಿಐ(Yallapur CPI) ರಮೇಶ್‌ ಹಾನಪುರ, ಪಿಎಸ್ ಐ ರಮೇಶ್ ಒಂದಲಿ, ಸಿದ್ದಪ್ಪ ಗುಡಿ ಹಾಗೂ ಸಿಬ್ಬಂದಿಗಳಾದ ಮಹಮದ್ ಶಫಿ‌ ಶೇಖ್ , ಬಸವರಾಜ ಹಗರಿ, ಧರ್ಮಾ ನಾಯ್ಕ,  ಉಮೇಶ ತುಂಬುರಗಿ, ಶೋಭಾ ನಾಯ್ಕ, ಗಿರೀಶ ಲಮಾಣಿ, ಪರಮೇಶ್ವರ ಎಸ್, ಸುರೇಶ,  ಮಹಾವೀರ, ರಾಚಪ್ಪ, ಸಂತೋಷ ಬಾಳೆರ ಮತ್ತು ಕಾರವಾರದ ಟೆಕ್ನಿಕಲ್ ಸಿಬ್ಬಂದಿಗಳು ಸಹಕರಿಸಿದ್ದರು.  ಪತ್ರಿಕಾಗೋಷ್ಠಿಯಲ್ಲಿ ಅಡಿಶನಲ್ ಎಸ್ಪಿ ಕೃಷ್ಣಮೂರ್ತಿ ಹಾಜರಿದ್ದರು.

ಇದನ್ನು ಓದಿ : ಜಿ.ಪಂ ಸದಸ್ಯ ಹತ್ಯೆ ಕೇಸ್. ವಿನಯ ಕುಲಕರ್ಣಿ ಸೇರಿ 16 ಆರೋಪಿಗಳಿಗೆ ಜೀವಾವಧಿ. ಶಾಸಕ ಸ್ಥಾನ‌ ರದ್ದು.*

ಮುರ್ಡೇಶ್ವರದಲ್ಲಿ ಸರ್ಕಾರಿ ಬಸ್ ಗೆ ಬೆಂಕಿ. ಪ್ರಯಾಣಿಕರು‌ ಸೇಪ್. ಆಟೋ ಚಾಲಕನ ಸಾಹಸ.