ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಪ್ರಧಾನಮಂತ್ರಿ ಜನಧನ ಯೋಜನೆಯಡಿ(Prime Minister Janadhan Scheme) ಕಡಿಮೆ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಿಕೊಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ ಲಕ್ಷಾಂತರ ರೂ ಪೀಕಿದ(Fraud) ಘಟನೆ ನಡೆದಿದೆ.
ಹಂತ ಹಂತವಾಗಿ ₹68.58 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿದ ಆರೋಪದಡಿ ಮೂವರ ವಿರುದ್ಧ ಭಟ್ಕಳ(Bhatkal) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳ್ಳಿಕೇರಿ ಕೋಟಖಂಡ ಮಾರುಕೇರಿ ನಿವಾಸಿ(Marukeri Native) ಹರಿಣಿ ಗಜಾನನ ಹೆಬ್ಬಾರ ಎಂಬುವವರು ನೀಡಿದ ದೂರಿನ ಮೇರೆಗೆ ನವೀನ ಕುಮಾರ, ಪ್ರಕಾಶ ಕುಮಾರ ಹಾಗೂ ಲಕ್ಷ್ಮೀ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
2024ರ ಫೆಬ್ರವರಿ 19ರಂದು ಆರೋಪಿಗಳು 8150898121 ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ, ತಾವು ಪ್ರಧಾನ ಮಂತ್ರಿ ಜನಧನ ಯೋಜನೆಯ(PM Janadhan Scheme) ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದಾರೆ. ಬಳಿಕ ವಾಟ್ಸ್ಆಪ್ ಮೂಲಕ ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ಕಳುಹಿಸಿ, ಕಡಿಮೆ ಬಡ್ಡಿದರದಲ್ಲಿ ಹೆಚ್ಚಿನ ಮೊತ್ತದ ಸಾಲ ಮಂಜೂರು ಮಾಡಿಕೊಡುವುದಾಗಿ ನಂಬಿಸಿದದ್ದರು.
ಆರಂಭದಲ್ಲಿ ಪ್ರಕ್ರಿಯೆ ಶುಲ್ಕದ ಹೆಸರಿನಲ್ಲಿ ₹94,644 ಪಡೆದ ಆರೋಪಿಗಳು, ಬಳಿಕ ಸಾಲ ಮಂಜೂರಿಗೆ ಪ್ರೊಸೆಸಿಂಗ್ ಶುಲ್ಕ, ಜಿಎಸ್ಟಿ, ಭದ್ರತಾ ಠೇವಣಿ, ವಿಮೆ, ಎನ್ಒಸಿ ಹಾಗೂ ದಾಖಲೆ ಪರಿಶೀಲನೆ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ ಪದೇ ಪದೇ ಹಣ ಪಾವತಿಸುವಂತೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಗಳ ಸೂಚನೆಯಂತೆ ಹರಿಣಿ ಹೆಬ್ಬಾರ ಅವರು ಕರ್ನಾಟಕ ಬ್ಯಾಂಕ್(Karnataka Bank), ಎಚ್ಡಿಎಫ್ಸಿ ಬ್ಯಾಂಕ್(HDFC Bank) ಹಾಗೂ ಕೆನರಾ ಬ್ಯಾಂಕ್(Canara Bank) ಖಾತೆಗಳಿಗೆ 2024ರ ಫೆಬ್ರವರಿ 20ರಿಂದ 2026ರ ಜನವರಿ 25ರವರೆಗೆ ವಿವಿಧ ದಿನಾಂಕಗಳಲ್ಲಿ ಹಲವು ಕಂತುಗಳಲ್ಲಿ ಒಟ್ಟು ₹68,58,754 ವರ್ಗಾವಣೆ ಮಾಡಿದ್ದಾರೆ. ಆದರೆ ಇಷ್ಟೊಂದು ಹಣ ಪಡೆದಿದ್ದರೂ ಯಾವುದೇ ಸಾಲ ಮಂಜೂರು ಮಾಡದೇ, ಹಣವನ್ನೂ ಹಿಂದಿರುಗಿಸಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ವಂಚನೆಗೊಳಗಾದ ಬಗ್ಗೆ ಹರಿಣಿ ಹೆಬ್ಬಾರ ಅವರು ಭಟ್ಕಳ(Bhatkal) ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ಕಲಂಗಳಡಿ ಆನ್ಲೈನ್ ವಂಚನೆ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆ ಹಾಗೂ ವರ್ಗಾವಣೆಯಾದ ಹಣದ ಜಾಡು ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
