ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಮುಂಬೈ(Mumbai) : ಪ್ರಧಾನಮಂತ್ರಿ ನರೇಂದ್ರ ಮೋದಿ ( PM Narendra Modi) ಕಾರ್ಯಕ್ರಮವೊಂದರಲ್ಲಿ ಆತಂಕ ವ್ಯಕ್ತಪಡಿಸಿದ್ದ ಇಬ್ಬರು ಅನಧಿಕೃತ ವ್ಯಕ್ತಿಗಳನ್ನ ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ರೋಹನ್ ಪಾರೇಖ್ ಎಂದು ಗುರುತಿಸಲಾಗಿದ್ದು, ಇತನ ಜೊತೆಯಲ್ಲಿ ಬಂದೂಕುಧಾರಿಯಾಗಿ ಬಂದಿದ್ದ ಮತ್ತೋರ್ವನನ್ನು ವಶಕ್ಕೆ ಪಡೆಯಲಾಗಿದೆ. ಆತನ ಬಳಿಯೂ ಪ್ರಧಾನಿ ಕಚೇರಿಯ ನಕಲಿ ಗುರುತಿನ ಚೀಟಿ ಹಾಗೂ ಬಂದೂಕನ್ನು ಜಪ್ತಿ ಮಾಡಲಾಗಿದೆ.

ಮುಂಬೈನ ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ನೀತಾ ಮುಖೇಶ್ ಅಂಬಾನಿ ಕಲ್ಬರಲ್ ಸೆಂಟರ್‌ನಲ್ಲಿ (Neeta mukhesh Ambani Cultural Center) ನಡೆಯಲಿರುವ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಭಾಗವಹಿಸಲಿದ್ದರು. ಈ ಸಂದರ್ಭದಲ್ಲಿ ವೇದಿಕೆ ಬಳಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತರಿಂದ ಪಿಸ್ತೂಲು ಹಾಗೂ ಪ್ರಧಾನ ಮಂತ್ರಿ ಕಚೇರಿಯ ನಕಲಿ ಗುರುತಿನ ಚೀಟಿ ಲಭಿಸಿದೆ.

ವಾರ್ಷಿಕ ಗ್ಲೋಬಲ್‌ ಫಿನ್‌ಟೆಕ್ ಫೆಸ್ಟ್ (GFF) 2026 ಅನ್ನು ಪ್ರಧಾನಿಗಳು ಉದ್ಘಾಟಿಸಲಿದ್ದಾರೆ. ನಾಲ್ಕು ದಿನ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿಶ್ವದ ಪ್ರಮುಖ ಕಂಪನಿಗಳು ಭಾಗವಹಿಸಿ, ಕೃತಕ ಬುದ್ಧಿಮತ್ತೆ ಕ್ವಾಟಮ್ ಹಾಗೂ ಭಾರತದಲ್ಲಿ ಹೂಡಿಕೆ ಬಗ್ಗೆ ಸಮಾವೇಶ ನಡೆಯಲಿದೆ. ವೇದಿಕೆ ಬಳಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿದ್ದು, ಆತನನ್ನು ನಿಲ್ಲಿಸಿ ವಿಚಾರಿಸಿದಾಗ ವಿಷಯ ಗೊತ್ತಾಗಿದೆ.

ಪ್ರಧಾನಿ ನರೇಂದ್ರ ಮೋದಿ (PM Narendre Modi) ಕಾರ್ಯಕ್ರಮದಲ್ಲಿ ಈ ರೀತಿಯ ಆಘಾತಕಾರಿ ಬೆಳವಣಿಗೆ ಕಂಡುಬಂದ ಹಿನ್ನಲೆ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರೋಹನ್ ಪಾರೇಖ್ ನನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ತನಿಖೆ ಆರಂಭಿಸಿದ್ದಾರೆ.

ರೋಹನ್ ಪಾರೇಖ್ ಯಾರು ಆತನ ಹಿನ್ನಲೆಯೇನು, ಈ ರೀತಿ ಅಕ್ರಮ ಪ್ರವೇಶ ಪಡೆದಿದ್ದೇಕೆ? ನಕಲಿ ಗುರುತಿನ ಚೀಟಿ ಇದ್ದರೂ ಕಾರ್ಯಕ್ರಮಕ್ಕೆ ಪ್ರವೇಶಿಸಿದ್ದು ಹೇಗೆ? ಇವರ ಉದ್ದೇಶ ಏನಾಗಿತ್ತು? ಈ ಘಟನೆ ಹಿಂದೆ ಯಾರ ಕೈವಾಡವಿದೆ? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.