ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ನವದೆಹಲಿ(Newdelhi) : ಪಾಕಿಸ್ತಾನದ ಎಫ್-16ನ್ನು(Pak F-16) ಹೊಡೆದುರುಳಿಸಿ, ಪಾಕಿಸ್ತಾನದ ಗಡಿಯೊಳಗೆ ಇಳಿದು ಶೌರ್ಯ ಮೆರೆದಿದ್ದ ಗ್ರೂಪ್ ಕ್ಯಾಪ್ಟನ್, ವೀರ ಚಕ್ರ ಪುರಸ್ಕೃತ ಅಭಿನಂದನ್ ವರ್ಧಮಾನ್(Abhinandan Vardhaman) ಅವರು ತಮ್ಮ ಸೇವಾ ಅವಧಿ ಮುಗಿಯುವ ಮುನ್ನವೇ ವಾಯುಪಡೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ.

ಫೆಬ್ರವರಿ 27,2019ರಂದು ನಿಯಂತ್ರಣ ರೇಖೆಯ ಮೇಲೆ ನಡೆದ ಕಾದಾಟದಲ್ಲಿ ಅವರು ಇಡೀ ವಿಶ್ವದ ಗಮನ ಸೆಳೆದಿದ್ದರು. ತಮ್ಮ ನಿವೃತ್ತಿ ನಂತರ ಖಾಸಗಿ ವಿಮಾನಯಾನ ಸಂಸ್ಥೆಯೊಂದರಲ್ಲಿ ಕಮರ್ಷಿಯಲ್ ಪೈಲಟ್(Commercial Pilot) ಆಗಿ ಅವರ ಕಾರ್ಯನಿರ್ವಹಿಸಲಿದ್ದಾರೆಂದು ತಿಳಿದುಬಂದಿದೆ.

2019ರ ಫೆಬ್ರವರಿ 14ರಂದು ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಗೆ(Pulwam Terror Attack) ಪ್ರತಿಯಾಗಿ ಭಾರತವು ಬಾಲಾಕೋಟ್‌ನಲ್ಲಿರುವ(Balacot) ಉಗ್ರರ ನೆಲೆಗಳ ಮೇಲೆ ವಾಯುದಾಳಿ(Airstrike) ನಡೆಸಿತ್ತು. ಫೆ. 27ರಂದು ಪಾಕ್ ಯುದ್ಧವಿಮಾನಗಳು ಭಾರತದ ಗಡಿಯನ್ನು ಪ್ರವೇಶಿಸಿದ್ದವು. ಈ ವೇಳೆ ಅಭಿನಂದನ್ ತಮ್ಮ ಮಿಗ್ -21 ಬೈಸನ್(Mig=21 Bison) ವಿಮಾನದ ಮೂಲಕ ಪಾಕ್‌ನ ಎಫ್-16 ವಿಮಾನವನ್ನು ಹೊಡೆದು ಉರುಳಿಸಿ ಸಾಹಸ ಮೆರೆದಿದ್ದರು.

ಆ ಸಂದರ್ಭದಲ್ಲಿ ನಡೆದ ಯುದ್ಧದಲ್ಲಿ ಅಭಿನಂದನ್ ಅವರ ವಿಮಾನಕ್ಕೂ ಹಾನಿಯಾಗಿತ್ತು. ಈ ವೇಳೆ ಅವರು ಪ್ಯಾರಾಚೂಟ್ ಮೂಲಕ ವಿಮಾನದಿಂದ ಬೇರ್ಪಟ್ಟಿದ್ದರು. ಇಳಿಯುವಾಗ ಅವರು ಪಾಕ್ ಆಕ್ರಮಿತ ಕಾಶ್ಮೀರದ(POK) ನೆಲಕ್ಕೆ ಇಳಿದ್ದರು. ಪಾಕ್ ಸೇನೆ ಅವರನ್ನ ವಶಕ್ಕೆ ಪಡೆದಿತ್ತು. ತದನಂತರ ಅವರಿಗೆ ದೈಹಿಕ ಹಿಂಸೆಯನ್ನು ನೀಡಲಾಗಿತ್ತು. ಆದರೆ ಯಾವುದಕ್ಕೂ ಅಭಿನಂದನ್ ಜಗ್ಗಲಿಲ್ಲ.

ಅವರ ಧೈರ್ಯ, ಸ್ಥಿರತೆ ಎಲ್ಲರಿಗೂ ಮಾದರಿಯಾಗಿತ್ತು. ರಾಜತಾಂತ್ರಿಕ ಒತ್ತಡಕ್ಕೆ ಮಣಿದ ಪಾಕ್‌ ಸರ್ಕಾರ ಮಾರ್ಚ್ ಎರಡರಂದು ವಾಘಾ ಬಾರ್ಡರ್(Vagh Boarder) ಮೂಲಕ ಅವರನ್ನು ಭಾರತಕ್ಕೆ ಹಸ್ತಾಂತರಿಸಿತ್ತು. ಅಂದಿನಿಂದ ಅಭಿನಂದನ್(Abhinandan) ಎಲ್ಲರ ಕಣ್ಮಣಿಯಾಗಿಬಿಟ್ಟರು.