ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮಂಗಳೂರು (Mangalore ) :
ಚಲಿಸುತ್ತಿದ್ದ ಸ್ಕೂಟಿಯ ಮೇಲೆ ಮರ ಬಿದ್ದು ಸವಾರ ಮೃತಪಟ್ಟು ಮೂರು ದಿನ ಕಳೆದರೂ ಅವರು ಕೊಂಡೊಯ್ಯುತ್ತಿದ್ದ ಕೋಳಿ(Hen) ಇನ್ನೂವರೆಗೂ ಸ್ಥಳದಲ್ಲಿ ಇದ್ದು ಅಚ್ಚರಿ ಮೂಡಿಸಿದ ಘಟನೆ ವರದಿಯಾಗಿದೆ.
ಕಡಬದ ಕೋಡಿಂಬಾಳದಲ್ಲಿ (Kadaba kodimbala) ಮರ ಬಿದ್ದು ಸ್ಕೂಟಿ ಸವಾರ ಸೀತಾರಾಮ ಎಂಬುವವರು ಮೃತಪಟ್ಟಿದ್ದರು. ದೀಪಾವಳಿ (Deepavali) ಸಂಬಂಧ ಸೀತಾರಾಮ ಅವರು ಎಡಮಂಗಲದ(Edamangala) ಕುಟುಂಬದ ಮನೆಯಲ್ಲಿ ನಡೆಯುತ್ತಿದ್ದ ದೈವದ ಹರಕೆಗಾಗಿ ಕೋಡಿಂಬಾಳದಲ್ಲಿ ಕೋಳಿ ಖರೀದಿಸಿ ತೆರಳುತ್ತಿದ್ದರು. ಈ ವೇಳೆ ರಸ್ತೆ ಪಕ್ಕದ ಮರ ಸ್ಕೂಟಿ ಮೇಲೆ ಬಿದ್ದು ಸೀತಾರಾಮ ಸಾವನ್ನಪ್ಪಿದ್ದರು.
ಆದ್ರೆ ಜೊತೆಗಿದ್ದ ಕೋಳಿಗೆ ಏನೂ ಆಗಿರಲಿಲ್ಲ. ಆ ವೇಳೆ ಹತ್ತಿರದ ಕಾಡಿನೊಳಗೆ ಓಡಿದ್ದ ಕೋಳಿ ನಂತರ ಜನರು ಚದುರಿದಾಗ ಸ್ಕೂಟಿ ಮೇಲೆ ಬಂದು ಕುಳಿತಿದೆ. ಆದ್ರೆ ಮೂರು ದಿನವಾದರೂ ಕೋಳಿ ಸ್ಥಳ ಬಿಟ್ಟು ಹೋಗದೇ ಇರೋದು ಅಚ್ಚರಿಗೆ ಕಾರಣವಾಗಿದೆ.
ಇದು ದೇವರ ಹರಕೆ(God Spread) ಕೋಳಿಯಾಗಿದ್ದರಿಂದ ಯಾರು ಒಯ್ಯುವ ಮನಸ್ಸು ಮಾಡಲಿಲ್ಲ. ಒಯ್ದರೆ ಏನಾದ್ರು ತೊಂದರೆ ಆದರೆ ಆಗಬಹುದು ಎಂಬ ಭಯ ಇರಬಹುದು. ಇನ್ನೂ ಎಷ್ಟು ದಿನ ಕೋಳಿ ಇಲ್ಲೇ ಇರುತ್ತೋ ಕಾದು ನೋಡಬೇಕು.
ಇದನ್ನು ಓದಿ : ಅಪ್ರಾಪ್ತ ಬಾಲಕನಿಗೆ ವಾಹನ ನೀಡಿದ ಮಾಲಕನಿಗೆ ಬಿತ್ತು ಬರೋಬ್ಬರಿ ದಂಡ
ಸಂಬಂಧಿಕರಿಗೆ ಕಾಡುಕುರಿ ಮಾಂಸ ಹಂಚಲು ಹೊರಟಿದ್ದ ಇಬ್ಬರ ಬಂಧನ