ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಕಾರವಾರ : ಹೆಸ್ಕಾಂ ಕುಮಟಾ(Hescom Kumta) ಉಪವಿಭಾಗದ 33/11ಕೆ.ವಿ ಮಿರ್ಜಾನ್(Mirjan) ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಸೆ.30 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕುಮಟಾ ತಾಲೂಕಿನ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಮಿರ್ಜಾನ್ ಖಂಡಗಾರ, ನಾಗೂರ, ಬರ್ಗಿ, ಉಪ್ಪಿನಪಟ್ಟಣ, ಯಲವಳ್ಳಿ, ಕೋಡ್ಕಣಿ, ದಿವಗಿ ಮಾರ್ಗದ ಎಲ್ಲಾ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಕುಮಟಾ ಹೆಸ್ಕಾಂ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು(ವಿ)ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊನ್ನಾವರ ವಿದ್ಯುತ್ ವ್ಯತ್ಯಯ : ಹೊನ್ನಾವರ(Honnavar) ತಾಲೂಕಿನ ಗ್ರಾಮೀಣ ಶಾಖೆಯ ಸಾಲ್ಕೋಡ, ಕಡ್ಲೆ, ಸುಬ್ರಹ್ಮಣ್ಯ ಮತ್ತು ಹಡಿನಬಾಳ ಫೀಡರ್‌ಗಳ 11 ಕೆ.ವಿ ಮಾರ್ಗದ ನಿರ್ವಹಣೆಯ ನಿಮಿತ್ತ ಈ ಫೀಡರ್‌ಗಳ ವ್ಯಾಪ್ತಿಯಲ್ಲಿ ಸೆ.30 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೊನ್ನಾವರ ಉಪ-ವಿಭಾಗದ ಸಹಾಯಕಕಾರ್ಯನಿರ್ವಾಹಕ ಇಂಜಿನೀಯರ್(ವಿ)ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.