ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಬಾಗಲಕೋಟೆ(Bagalakote) : ಮಹಿಳಾ ಅಧಿಕಾರಿಗಳ(Womens Officers) ತಂಡವೊಂದು ಭ್ರೂಣಹತ್ಯೆ ಮತ್ತು ಭ್ರೂಣಲಿಂಗ ಜಾಲ ಪತ್ತೆಹಚ್ಚಲು ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾದ ಘಟನೆ ನಡೆದಿದೆ.
ಬಾಗಲಕೋಟೆಯ(Bagalakote) ಮಹಿಳಾ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮಹಾರಾಷ್ಟ್ರದ ಜತ್ತ ತಾಲೂಕಿನ ಜಾಡರ ಬಬಲಾದಿಯ ತೋಟದ ಮನೆಯಲ್ಲಿ ಅಕ್ರಮವಾಗಿ ಇರಿಸಲಾಗಿದ್ದ ಸ್ಕ್ಯಾನಿಂಗ್ ಯಂತ್ರ(Scaning Manchine) ಪತ್ತೆ ಮಾಡಲಾಗಿದೆ. ನಿಖಿಲ್ ತೇಲಿ ಹಾಗೂ ದಾನಮ್ಮ ತೇಲಿ ಎಂಬ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ.
ಜಮಖಂಡಿ ಅಸಿಸ್ಟೆಂಟ್ ಕಮಿಷನರ್(Jamakhandi Assistant Comissioner) ಶ್ವೇತಾ ಬಿಡಿಕರ್ ಗರ್ಭಿಣಿಯಂತೆ ವೇಷ ಧರಿಸಿದ್ರೆ, ಆರೋಗ್ಯ ಸೌಧ ಡಿಡಿ ಡಾ. ಶೋಭಾ ನಾದಿನಿಯಂತೆ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಸುವರ್ಣಾ ಕುಲಕರ್ಣಿ ಗರ್ಭೀಣಿ ಮಹಿಳೆ ತಾಯಿಯಂತೆ ವೇಷ ಧರಿಸಿ ಕಾರ್ಯಾಚರಣೆ ನಡೆಸಿದ್ದರು. ಮಹಾಲಿಂಗಪುರದ ಕವಿತಾ ಎಂಬ ನಕಲಿ ವೈದ್ಯೆ ನೀಡಿದ ಮಾಹಿತಿಯ ಮೇರೆಗೆ ಮಹಾರಾಷ್ಟ್ರದ(Maharashtra) ಜತ್ತ ತಾಲೂಕಿನ ಜಾಡರ ಬಬಲಾದಿ, ಕರ್ಜಗಿ ಸೇರಿದಂತೆ ಹಲವೆಡೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಬೃಹತ್ ಬ್ರೂಣಹತ್ಯೆ ಮತ್ತು ಬ್ರೂಣಲಿಂಗ ಜಾಲ ಪತ್ತೆಯಾಗಿದೆ.
ಕಾರ್ಯಾಚರಣೆ ಸಂದರ್ಭದಲ್ಲಿ ಸ್ಕ್ಯಾನಿಂಗ್ ಯಂತ್ರ(Scaning Machine), ಎಂಟಿಬಿ ಡ್ರಗ್ಸ್(MTB Drugs) ಹಾಗೂ ಎರಡು ಇಂಜೆಕ್ಷನ್‌ಗಳು ಪತ್ತೆಯಾಗಿವೆ. ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗಿರುವ ಡಾ. ಸಂಜಯ್ ವಾಘೋರೆ ಪರಾರಿಯಾಗಿದ್ದಾನೆ. ಪರಾರಿಯಾದ ವೈದ್ಯನಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ಏಷ್ಟೆ ಕಟ್ಟುನಿಟ್ಟಿನ ಕ್ರಮ ಇದ್ರೂ ಕೂಡ ಅಲ್ಲಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಭ್ರೂಣಹತ್ಯೆಗೆ ಸಂಬಂಧಿಸಿದ ಬೃಹತ್ ಜಾಲ ಕದ್ದು ಮುಚ್ಚಿ ಸಕ್ರಿಯವಾಗಿರುವುದು ಮಹಿಳಾ ಅಧಿಕಾರಿಗಳ ಕಾರ್ಯಚರಣೆಯಿಂದ ಗೊತ್ತಾಗಿದೆ.