ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕಾರವಾರ(Karwar) : ತಮಿಳುನಾಡಿನ(Tamilunadu) ಕೊಯಮತ್ತೂರಿನ ಎಲಿವೇಟ್ ಈಜುಗೊಳದಲ್ಲಿ (Elevate Swimming Pool) ಬುಧವಾರ ಜರುಗಿದ ‘5ನೇ ವೆಟರನ್ಸ್ ಸ್ಪೋರ್ಟ್ಸ್ & ಗೇಮ್ಸ್ ನ್ಯಾಷನಲ್ ಚಾಂಪಿಯನ್‌ಶಿಪ್ –2026’ ನಲ್ಲಿ ಕರ್ನಾಟಕವನ್ನು(Karnataka) ಪ್ರತಿನಿಧಿಸಿದ್ದ ಕಾರವಾರದ(Karwar) ಸುದರ್ಶನ ತಾಂಡೇಲ್ ಭರ್ಜರಿ ನಾಲ್ಕು ಚಿನ್ನದ ಪದಕಗಳನ್ನ ಬಾಚಿಕೊಂಡಿದ್ದಾರೆ.
ತಾವೂ ಪಾಲ್ಗೊಂಡ ನಾಲ್ಕೂ ವಿಭಾಗಗಳಲ್ಲಿ ಎದುರಾಳಿಗಳಿಗಿಂತ ಭಾರೀ ಮುನ್ನಡೆ ಸಾಧಿಸುವ ಮೂಲಕ ನಾಲ್ಕು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಕಾರವಾರ(Karwar) ನಗರದದ ಕಳಸವಾಡ (ಚಿತ್ತಾಕುಲ) ಮೂಲದ ನಿವೃತ್ತ ಗಡಿ ಭದ್ರತಾ ಪಡೆ (ಬಿಎಸ್‌ಎಫ್BSF) ಯೋಧ ಹಾಗೂ ಪ್ರಸ್ತುತ ಕಾರವಾರ ಕರಾವಳಿ ಭದ್ರತಾ ಪೊಲೀಸ್ (CSP) ಬೋಟ್ ಕ್ಯಾಪ್ಟನ್ ಆಗಿ ಸುದರ್ಶನ ಕಾರ್ಯನಿರ್ವಹಿಸುತ್ತಿದ್ದಾರೆ. ಸುದರ್ಶನ ಪಿ. ತಾಂಡೇಲ್ ಅವರು ರಾಷ್ಟ್ರಮಟ್ಟದ ಈಜು(National Swimming) ಸ್ಪರ್ಧೆಯಲ್ಲಿ ಅದ್ವಿತೀಯ ಸಾಧನೆ ಮೆರೆದು ಕರಾವಳಿಗೆ ಹಾಗೂ ಇಡೀ ಕರ್ನಾಟಕಕ್ಕೆ(Coastal Karnataka) ಅಪಾರ ಕೀರ್ತಿ ತಂದಿದ್ದಾರೆ.
50 ಮೀಟರ್ ಫ್ರೀಸ್ಟೈಲ್ – ಪ್ರಥಮ ಸ್ಥಾನ (ಚಿನ್ನದ ಪದಕ), 100 ಮೀಟರ್ ಫ್ರೀಸ್ಟೈಲ್ – ಪ್ರಥಮ ಸ್ಥಾನ (ಚಿನ್ನದ ಪದಕ), 50 ಮೀಟರ್ ಬ್ಯಾಕ್‌ಸ್ಟ್ರೋಕ್ – ಪ್ರಥಮ ಸ್ಥಾನ (ಚಿನ್ನದ ಪದಕ), 100 ಮೀಟರ್ ಬ್ಯಾಕ್‌ಸ್ಟ್ರೋಕ್ – ಪ್ರಥಮ ಸ್ಥಾನ (ಚಿನ್ನದ ಪದಕ) ಪಡೆದಿದ್ದಾರೆ.
ಸಮುದ್ರದಲ್ಲೂ(Sea) ಮೀನಿನಂತೆ ಈಜುವ ಸುದರ್ಶನ : ಕಾರವಾರದ ಸುದರ್ಶನ ತಾಂಡೇಲ್(Karwar Sudarshana Tandel) ಕೇವಲ ಈಜು ಕೊಳದಲ್ಲಿ ಮಾತ್ರವಲ್ಲದೆ, ಕಡಲ ಅಲೆಗಳ(Sea waves) ನಡುವೆಯೂ ಸತತವಾಗಿ ಈಜುವ ಪರಿಣಿತಿ ಹೊಂದಿದ್ದಾರೆ. ಭಾರತೀಯ ನೌಕಾಪಡೆಯು(Indian Navy) ಕಾರವಾರದ ಕಾದಂಬ ನೌಕಾನೆಲೆಯ ವ್ಯಾಪ್ತಿಯ ಬಿಣಗಾ(Binaga) ಕಡಲತೀರದಲ್ಲಿ ನೌಕಾ ದಿನಾಚರಣೆ(Naval Day) ಹಾಗೂ ವಿಜಯ ದಿವಸ್(Vijay Diwas) ಅಂಗವಾಗಿ ಆಯೋಜಿಸುತ್ತಿದ್ದ ಪ್ರತಿಷ್ಠಿತ ‘ರಾಷ್ಟ್ರಮಟ್ಟದ ಮುಕ್ತ ಸಮುದ್ರ ಈಜು ಸ್ಪರ್ಧೆ’ಯಲ್ಲಿ ಸತತ 6 ಬಾರಿ ಪ್ರಥಮ ಸ್ಥಾನ ಪಡೆದು ಅಪರೂಪದ ದಾಖಲೆ ಬರೆದಿದ್ದರು.
ಈ ಹಿಂದೆ ದೇಶದ ವಿವಿಧ ರಾಜ್ಯಗಳ ಪ್ರಮುಖ ಈಜುಪಟುಗಳು ಹಾಗೂ ಸೇನಾ ಯೋಧರ ಕಠಿಣ ಪೈಪೋಟಿಯ ನಡುವೆ, 1,800 ಮೀಟರ್ ದೂರದ ತೆರೆದ ಸಮುದ್ರವನ್ನು ಕೇವಲ 19 ನಿಮಿಷ 10 ಸೆಕೆಂಡುಗಳಲ್ಲಿ ಈಜಿ ಮುಗಿಸಿ ನೌಕಾಸೇನೆಯ ಕರ್ನಾಟಕ ಫ್ಲ್ಯಾಗ್ ಆಫೀಸರ್ ಕೆ.ಜೆ. ಕುಮಾರ್ ಅವರಿಂದ ಗೌರವ-ಪ್ರಶಸ್ತಿ ಸ್ವೀಕರಿಸಿದ್ದರು.
ಸೇನೆಯಿಂದ ನಿವೃತ್ತರಾದ ನಂತರವೂ ಕರಾವಳಿ ಭದ್ರತಾ ಪಡೆಯಲ್ಲಿ(BSF) ಕರ್ತವ್ಯ ನಿರ್ವಹಿಸುತ್ತಾ, ಈಜು ಕ್ರೀಡೆಯಲ್ಲಿ ಕಠಿಣ ಪರಿಶ್ರಮ ಮತ್ತು ಶಿಸ್ತನ್ನು ಮೈಗೂಡಿಸಿಕೊಂಡು ರಾಷ್ಟ್ರಮಟ್ಟದಲ್ಲಿ ನಾಲ್ಕು ಸ್ವರ್ಣ ಪದಕಗಳನ್ನು(Gold Medals) ಬಾಚಿಕೊಂಡ ಸುದರ್ಶನ ತಾಂಡೇಲ್ ಅವರ ಅಭೂತಪೂರ್ವ ಸಾಧನೆಗೆ ಕರಾವಳಿ ಭಾಗದ ಕ್ರೀಡಾಭಿಮಾನಿಗಳು, ಗಣ್ಯರು ಹಾಗೂ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.