ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಪಣಜಿ(Panaji): ದೇಶದ ಸಿನಿಮಾರಂಗದ ಹಿರಿಯ ಬಹುಭಾಷಾ ನಟ(Senior Multilanguage Actor) ನಾನಾ ಪಾಟೇಕರ್(Naana Patekar) ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಗೋವಾದ(Goa) ತಮ್ಮ ನಿವಾಸದಲ್ಲಿ ಸಂಭವಿಸಿದ ತೀವ್ರ ಹೃದಯ ಸ್ತಂಭನದಿಂದ ಅವರು ಇಹಲೋಕ ತ್ಯಜಿಸಿದ್ದಾರೆ.
ಅವರ ಹಠಾತ್ ನಿಧನದ ಸುದ್ದಿ ಕನ್ನಡ(Kannada), ಹಿಂದಿ(Hindi) ಹಾಗೂ ಮರಾಠಿ(Marathi) ಚಿತ್ರರಂಗ ಸೇರಿದಂತೆ ಇಡೀ ಭಾರತೀಯ ಚಿತ್ರರಂಗಕ್ಕೆ(India CiniIndustries) ಆಘಾತ ಉಂಟುಮಾಡಿದೆ.
ಇಂದು ಬೆಳಿಗ್ಗೆ ಗೋವಾದ ಡೋನಾ ಪೌಲಾ(Goa Downpaula) ಪ್ರದೇಶದಲ್ಲಿರುವ ನಿವಾಸದಲ್ಲಿ ನಾನಾ ಪಾಟೇಕರ್ ಅಸ್ವಸ್ಥಗೊಂಡಿದ್ದರು. ತೀವ್ರ ಹೃದಯ ಸ್ತಂಭನಕ್ಕೆ ಒಳಗಾದ ಅವರನ್ನು ತಕ್ಷಣ ಮಣಿಪಾಲ್ ಆಸ್ಪತ್ರೆಗೆ(Manipal Hospital) ಕರೆದೊಯ್ಯಲಾಯಿತು. ವೈದ್ಯರು ಸತತ ಸುಮಾರು 45 ನಿಮಿಷಗಳ ಕಾಲ ಸಿಪಿಆರ್ ಮೂಲಕ ಜೀವ ಉಳಿಸುವ ಪ್ರಯತ್ನ ನಡೆಸಿದರೂ ಯಾವುದೇ ಸ್ಪಂದನೆ ದೊರೆಯಲಿಲ್ಲ. ಬೆಳಗ್ಗೆ 5.20ರ ಸುಮಾರಿಗೆ ಅವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು ಎಂದು ಮಣಿಪಾಲ್ ಆಸ್ಪತ್ರೆಯ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ಶೇಖರ್ ಸಾಲ್ಕರ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ-ಕಾನೂನು ಪ್ರಕರಣ (MLC) ದಾಖಲಿಸಲಾಗಿದ್ದು, ಸಾವಿನ ನಿಖರ ಕಾರಣವನ್ನು ಖಚಿತಪಡಿಸಿಕೊಳ್ಳಲು ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಕಳೆದ ಹಲವು ದಶಕಗಳ ಕಾಲ ಹಿಂದಿ ಹಾಗೂ ಮರಾಠಿ(Hindi and Marathi) ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ನಾನಾ ಪಾಟೇಕರ್, ತಮ್ಮ ವಿಭಿನ್ನ ಸಂಭಾಷಣೆ ಶೈಲಿ, ಗಂಭೀರ ಧ್ವನಿ, ತೀವ್ರ ಭಾವಾಭಿವ್ಯಕ್ತಿ ಹಾಗೂ ಪಾತ್ರಗಳಿಗೆ ಜೀವ ತುಂಬುವ ಅಭಿನಯದಿಂದ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದ ಜಾಗ ಪಡೆದಿದ್ದರು.
ಕ್ರಾಂತಿವೀರ್, ಪರಿಂದಾ, ತಿರಂಗಾ, ಅಗ್ನಿಸಾಕ್ಷಿ, ವೆಲ್‌ಕಮ್ ಸೇರಿದಂತೆ ಹಲವು ಟಾಪ್ ಚಿತ್ರಗಳ ಮೂಲಕ ಅವರು ಅಭಿನಯಿಸಿ ತಮ್ಮ ಛಾಪು ಮೂಡಿಸಿದ್ದರು. ವಿಶೇಷವಾಗಿ ಪರಿಂದಾ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ, ಕ್ರಾಂತಿವೀರ್ ಚಿತ್ರಕ್ಕಾಗಿ ಅತ್ಯುತ್ತಮ ನಟ ಹಾಗೂ ಅಗ್ನಿಸಾಕ್ಷಿ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದರು.
ಚಿತ್ರರಂಗದ ಜತೆಗೆ ಮರಾಠಿ ರಂಗಭೂಮಿಯಲ್ಲಿಯೂ ನಾನಾ ಪಾಟೇಕರ್ ತಮ್ಮದೇ ಆದ ಪ್ರಭಾವ ಬೀರಿದ್ದರು. ಅಭಿನಯದ ಜತೆಗೆ ನಿರ್ದೇಶನದಲ್ಲೂ ಗುರುತಿಸಿಕೊಂಡ ಅವರು ಪ್ರಹಾರ್: ದಿ ಫೈನಲ್ ಅಟ್ಯಾಕ್ ಚಿತ್ರದ ಮೂಲಕ ನಿರ್ದೇಶಕರಾಗಿಯೂ ಗಮನ ಸೆಳೆದಿದ್ದರು
ನಾನಾ ಪಾಟೇಕರ್ ಕನ್ನಡ ಚಿತ್ರರಂಗದಲ್ಲಿಯೂ(Kannada Cinema) ತಮ್ಮ ಅಭಿನಯದ ಛಾಪು ಮೂಡಿಸಿದ್ದರು. 2010ರಲ್ಲಿ ಬಿಡುಗಡೆಯಾದ ಯಕ್ಷ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಯೋಗರಾಜ್ ಪುಲಕೇಶ್ ಎಂಬ ಖಡಕ್ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸುವ ಮೂಲಕ ಕನ್ನಡ ಪ್ರೇಕ್ಷಕರ ಗಮನ ಸೆಳೆದಿದ್ದರು. ಯಕ್ಷ 2010ರ ಕನ್ನಡ ಚಿತ್ರವಾಗಿದ್ದು, ನಾನಾ ಪಾಟೇಕರ್ ಮತ್ತು ಯೋಗೇಶ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವುದನ್ನ ಗಮನಿಸಬಹುದಾಗಿದೆ.
ಸಾಮಾಜಿಕ ಚಟುವಟಿಕೆಯಲ್ಲೂ ಎತ್ತಿದ ಕೈ : ಸಿನಿರಂಗದ ಅಭಿನಯದ ಜೊತೆಗೆ ನಾನಾ ಪಾಟೇಕರ್(Naana Patekar) ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದರು. ನಟ ಮಕರಂದ್ ಅನಾಸ್ಪುರೆ ಅವರೊಂದಿಗೆ ‘ನಾಮ್ ಫೌಂಡೇಶನ್’ ಸ್ಥಾಪಿಸಿ, ವಿಶೇಷವಾಗಿ ಮಹಾರಾಷ್ಟ್ರದ(Maharashtra)ಬರಪೀಡಿತ ಪ್ರದೇಶಗಳ ರೈತರು ಹಾಗೂ ಅವರ ಕುಟುಂಬಗಳಿಗೆ ನೆರವು ಒದಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಬಹುಮುಖ ಪ್ರತಿಭೆ ಹೊಂದಿರುವ ಪಾಟೆಕರ್,ತಮ್ಮ ಅದ್ಭುತ ಅಭಿನಯ ಮತ್ತು ವಿಶಿಷ್ಟ ವ್ಯಕ್ತಿತ್ವದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅಭಿಮಾನಿಗಳ ಹೃದಯದಲ್ಲ ನೆಲೆಸಿದ್ದರು. ಅವರ ಹಠಾತ್ ನಿಧನಕ್ಕೆ ಚಿತ್ರರಂಗದ ಗಣ್ಯರು, ಸಹನಟರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದ್ದು ಶ್ರೇಷ್ಠ ನಟನನ್ನ ಕಳೆದುಕೊಂಡಂತಾಗಿದೆ.