ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಶಿವಮೊಗ್ಗ(Shivamogga) : ರಾಜ್ಯದ ಮಲೆನಾಡು(Malndadu) ಭಾಗಗಳಲ್ಲಿ ಮದುವೆಗಿಂತ ಬೀಗರೂಟದ ಬಗ್ಗೆ ಮಾತೇ ಜಾಸ್ತಿ. ಇಲ್ಲಿ ಮದುವೆ ಬಗ್ಗೆ, ವಧುವರರ ಬಗ್ಗೆ ಮಾತಾಡಿಕೊಳ್ಳೋರು ಹೆಚ್ಚಿಲ್ಲ. ಆದ್ರೆ ಮಾರನೇ ದಿನ ನಡೆಯುವ ಬೀಗರೂಟದ ಬಗ್ಗೆ ಬಾರೀ ಚರ್ಚೆ ನಡೆಯುತ್ತೆ.

ಇವತ್ತಿನ ದಿನ ಒಂದು ಮದುವೆ(Marriage) ಮಾಡಬೇಕೆಂದ್ರೆ ಪಾಲಕರು ಸೋತು ಸುಣ್ಣವಾಗಿ ಹೋಗುತ್ತಾರೆ. ಮಲೆನಾಡು ಭಾಗದಲ್ಲಿ ಮದುವೆ ಮಾಡಿಸುವ ದೊಡ್ಡವರಿಗೆ ಇದು ದೊಡ್ಡ ವಿಷಯ ಅಲ್ಲ. ಆದ್ರೆ ಸಾಮಾನ್ಯ ಜನರು, ಬಡವರಿಗೆ ಮಾತ್ರ ಕಷ್ಟವೇ. ಮದ್ಯಮ ವರ್ಗದ ಜನರು ಮದುವೆ ಮಾಡಿಸಬೇಕಂದ್ರೆ ಜನರ ತೋರಿಕೆಗಾಗಿ ಸಾಲ ಮಾಡಿ ಮದುವೆ ಮಾಡಿಸುತ್ತಾರೆ. ಅಲ್ಲದೇ ಭರ್ಜರಿಯಾಗಿ ಬೀಗರೂಟ ಹಾಕಿಸುತ್ತಾರೆ. ನಂತರ ಸಾಲ ತೀರಿಸಲು ವರ್ಷಾನುಗಟ್ಟಲೆ ತೆಗೆದುಕೊಳ್ಳುತ್ತಾರೆ. ಇದೀಗ ಶಿವಮೊಗ್ಗ(Shivamogga) ಜಿಲ್ಲೆಯ ಶಿಕಾರಿಪುರ(Shikarikoppa) ತಾಲೂಕಿನ ಗ್ರಾಮವೊಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದೆ.

ಶಿಕಾರಿಪುರ ತಾಲೂಕಿನ ಹರಗಿ ಗ್ರಾಮ(Shikaripur Taluku Haragi Village) ಸಂಪೂರ್ಣವಾಗಿ ಬೀಗರೂಟಕ್ಕೆ ತಡೆಹಾಕಿ ಮಾದರಿ ಕಾರ್ಯ ಮಾಡಿದೆ. ಸಾಲ ಮಾಡಿಕೊಂಡು ಬೇರೆಯವರನ್ನ ತೃಪ್ತಿಪಡಿಸುವ ಕಾರ್ಯವನ್ನ ಗ್ರಾಮದ ಜನರು ನಿಲ್ಲಿಸಿದ್ದಾರೆ. ಇನ್ಮುಂದೆ ಬೀಗರೂಟ ಕಾರ್ಯಕ್ರಮ ನಿಷೇಧಿಸಲಾಗಿದೆ. ಗ್ರಾಮದಲ್ಲಿ ಬಹುತೇಕರು ಈಡಿಗ ಸಮುದಾಯಕ್ಕೆ (Ediga Community) ಸೇರಿದವರಾಗಿದ್ದಾರೆ.

ಈ ಹಿಂದೆ ಮದುವೆಯ ನಂತರ ಕೇವಲ ಮನೆ ಮಂದಿಗೆ ಮಾತ್ರ ಬೀಗರೂಟ ಮಾಡಿಸಲಾಗುತಿತ್ತು. ಬಳಿಕ ದೊಡ್ಡ ಟ್ರೆಂಡ್ ಆಗಿ ನೂರಾರು, ಸಾವಿರಾರು ಮಂದಿಯನ್ನ ಕರೆಯಲಾಗುತಿತ್ತು. ಇದಕ್​ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತಿತ್ತು. ಬಳಿಕ ಸಾಲದ ಹೊರೆಯನ್ನ ಮದುವೆ ಮಾಡಿಸಿದ ಕುಟುಂಬದವರು ಹೊರಬೇಕಾಗಿತ್ತು.

ಈ ವರ್ಷ ಮಳೆಯೂ ಕಡಿಮೆಯಾಗಿದೆ. ಬದುಕು ಅಂದುಕೊಂಡಂತಿಲ್ಲ. ಕೃಷಿಯನ್ನ ನಂಬಿಕೊಂಡ ರೈತರು ಸಹ ಈ ಬಾರೀ ತೀವೃ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಕೃಷಿಯನ್ನ ಅವಲಂಭಿಸಿಕೊಂಡವರು ಕಷ್ಟ ಹೇಳತೀರದಾಗಿದೆ. ಹೀಗಾಗಿ ಸುಮ್ಮನೇ ತೋರಿಸಿಕೊಳ್ಳೋದು ಬೇಡ ಎಂದು ಗ್ರಾಮದ ಜನರು ಒಮ್ಮನಸ್ಸಿನಿಂದ ನಿರ್ಧಾರಕ್ಕೆ ಬಂದು ಬೀಗರೂಟಕ್ಕೆ ನಿರ್ಬಂಧ ಹೇರಿದ್ದಾರೆ.

ಎಲ್ಲರೂ ಕೂಡಿ ನಿರ್ಧರಿಸಿದಂತೆ ಯಾರಾದರೂ ಬೀಗರೂಟ ಏರ್ಪಡಿಸಿದ್ದು ಕಂಡುಬಂದಲ್ಲಿ ಅವರಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು. ಇಷ್ಟೇ ಅಲ್ಲ, ಬೇರೆಯವರ ಬೀಗರೂಟಕ್ಕೆ ಹೋಗಿ ಬಾಡು ತಿಂದು ಬಂದರೂ ತಲಾ 50 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಈ ಕಠಿಣ ನಿಯಮದ ಮೂಲಕ ಆರ್ಥಿಕ ಶಿಸ್ತು ತರಲು ಗ್ರಾಮಸ್ಥರು ಮುಂದಾಗಿದ್ದಾರೆ.

ರಾಜ್ಯದ ಕರಾವಳಿ(Coastal Karavali) ಭಾಗದಲ್ಲೂ ಕೂಡ ಹಲವೆಡೆ ಬೀಗರೂಟದ ಪದ್ದತಿ ಇತ್ತೀಚಿನ ವರ್ಷಗಳಲ್ಲಿ ಬೆಳೆದುಕೊಂಡು ಬಂದಿದೆ. ಇಲ್ಲಿ ಮದುವೆಗೆ ಬರುವವರಿಗಿಂತ ನೆಂಟರೂಟಕ್ಕೆ ಬರುವವರೆ ಹೆಚ್ಚು. ಹೀಗಾಗಿ ಮದುವೆ ಮಾಡಿಸುವ ಕುಟುಂಬದವರಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಹೀಗಾಗಿ ನೆಂಟರೂಟಕ್ಕೆ ಬ್ರೇಕ್ ಹಾಕಿದ್ದಲ್ಲಿ ಆರ್ಥಿಕ ಹೊರೆ ತಗ್ಗಿಸಿ ಸ್ವಲ್ಪ ನೀರಾಳರಾಗಬಹುದು. ಯೋಚನೆ ಮಾಡಿದ್ರೆ ಉತ್ತಮ.