ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಶಿರಸಿ(Sirsi) : ಅಕ್ರಮವಾಗಿ ಗೋಮಾoಸ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಆಧರಿಸಿ ಶಿರಸಿ ಪೊಲೀಸರು(Sirsi Police) ದಾಳಿ ನಡೆಸಿದ ಘಟನೆ ನಗರದ ಮುಸ್ಲಿಂ ಗಲ್ಲಿಯಲ್ಲಿ ನಡೆದಿದೆ.

ಶುಕ್ರವಾರ ಬೆಳಗ್ಗೆ ಶಿರಸಿ ಸಿಪಿಐ ಸಂಪತ್ ರವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಂದು ಕ್ರೆಟಾ ಕಾರು,ಸುಮಾರು 57kg ಮಾಂಸ ಹಾಗೂ ಇಬ್ಬರು ಆರೋಪಿತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಹಾವೇರಿ(Haveri) ಜಿಲ್ಲೆಯ ಅಕ್ಕಿ ಆಲೂರು(Akki Aluru) ನಲ್ಲಿರುವ ಉಳಿದ ಆರೋಪಿಗಳಿಗೆ ತಂಡ ರಚಿಸಿ ಕೊಂಡು ಶೋಧ ಕಾರ್ಯ ಮುಂದುವರೆಸಲಾಗಿದೆ.

ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ . ಎಸ್ಪಿ ದೀಪನ್ ಎಎಸ್ಪಿ ಕೃಷ್ಣಮೂರ್ತಿ ಹಾಗೂ ಡಿಎಸ್​ಪಿ ಶ್ರೀಮತಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ಸಂಪತ್ ಕುಮಾರ್ ಹಾಗೂ ಸಿಬ್ಬಂದಿಯವರಾದ ಗುರುರಾಜ್, ರಾಮದೇವ್, ಅಶೋಕ್,ಮಹದೇವ್,ಶಿವಾನಂದ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.