ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಮಂಗಳೂರು(Manglore) : ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆ(Konaje) ಸಮೀಪದ ಅಸೈಗೊಳಿಯಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ (KSRP) ಕಾರ್ಯನಿರ್ವಹಿಸುತ್ತಿರುವ ಈಶ್ವರ ಹರಿಕಾಂತ ಅವರ ಪುತ್ರಿ ವಿನಂತಿ ಈಶ್ವರ ಹರಿಕಾಂತ ಅವರು ಪ್ರತಿಷ್ಠಿತ ‘ಶ್ರೀ ಚಾಮುಂಡೇಶ್ವರಿ ಬಾಲ ಸದ್ಭಾವನಾ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ ವತಿಯಿಂದ ಮೈಸೂರು ದಸರಾ(Mysore Dasara) ಅಂಗವಾಗಿ ನೀಡಲಾಗುವ ಈ ಪ್ರಶಸ್ತಿಗೆ ವಿನಂತಿ ಈಶ್ವರ್ ಹರಿಕಾಂತ ಆಯ್ಕೆಯಾಗಿದ್ದು, ಅವರ ಸಾಂಸ್ಕೃತಿಕ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಗೌರವಿಸಲಾಗುತ್ತಿದೆ.

ಇದೇ 18 ರಂದು ಮೈಸೂರು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿರುವ ‘ಮೈಸೂರು ಸಿರಿ ದಸರಾ ಸಾಂಸ್ಕೃತಿಕ ಉತ್ಸವ’ದಲ್ಲಿ ವಿನಂತಿ ಈಶ್ವರ ಹರಿಕಾಂತ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಮೈಸೂರು ದಸರಾ ಸಾಂಸ್ಕೃತಿಕ ಸಂಭ್ರಮದ ಅಂಗವಾಗಿ ನಡೆಯುವ ಈ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಇದೇ ಸಂದರ್ಭದಲ್ಲಿ ವಿನಂತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವರು ಮಾಡಿರುವ ಸಾಧನೆಗೆ ದೊರೆತ ಈ ಗೌರವವು ಕುಟುಂಬದ ಸಂತಸಕ್ಕೆ ಕಾರಣವಾಗಿದೆ.

ಕೆಎಸ್ಆರ್ಪಿ ಹೆಡ್ ಕಾನ್ ಸ್ಟೆಬಲ್ ಈಶ್ವರ್ ಹರಿಕಾಂತ ಹಾಗೂ ಆರತಿ ಅವರ ಪುತ್ರಿಯಾಗಿದ್ದಾಳೆ.