ಕಾರವಾರ (KARWAR):  ಈ ಭೂಮಿಯಲ್ಲಿ ಹೆಣ್ಣಿಗಾಗಿ, ಹೊನ್ನಿಗಾಗಿ,  ಮಣ್ಣಿಗಾಗಿ ಏನೇನೋ ಆಗಿಬಿಡುತ್ತವೆ. ತಾಲೂಕಿನ ಹಣಕೋಣದ ಶ್ರೀಮಂತನ ಬರ್ಬರ ಹತ್ಯೆ(MURDER) ಹಿಂದಿನ ಜಾಡು ಹಿಡಿದು ಹೋದ ಪೊಲೀಸರಿಗೆ ಪಕ್ಕಾ ಮಾಹಿತಿ ಲಭಿಸಿದೆ.

ಇಂದು ಐ ಜಿ ಪಿ ಅಮಿತ್ ಸಿಂಗ್ ಹಣಕೋಣ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಸ್ಪಿ ನಾರಾಯಣ, ಡಿ ವೈ ಎಸ್ಪಿ ಗಿರೀಶ್ ಮಾಹಿತಿ ನೀಡಿದರು.

ಭಾನುವಾರ ಬೆಳಿಗ್ಗೆ ಹತ್ಯೆಯಾದ ವಿನಾಯಕ್ ನಾಯ್ಕ ಅವರ ಮನೆಯ ಮುಂಬದಿಯಿಂದಲೇ ಹಾದು ಹೋದ ಕಾರು ಪೊಲೀಸರಿಗೆ ಮಹತ್ವದ ಸುಳಿವು ನೀಡಿದೆ. ಅನೈತಿಕ ಸಂಬಂಧವೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಅದು ಸಂಬಂಧಿಕರಿಂದಲೇ ನಡೆದುಹೋದ ಬೆಚ್ಚಿಬೀಳಿಸಿದ ಹತ್ಯೆ.

ಅಂದು ಬೆಳಿಗ್ಗೆ ವಿನಾಯಕನ ಮನೆಯಿಂದ ಹೊರಟ ಕಾರು ಗೋವಾಕ್ಕೆ ವೇಗವಾಗಿ ಚಲಿಸಿದೆ. ಅಷ್ಟರಲ್ಲಿ ವಿನಾಯಕ ಪತ್ನಿ ವೈಶಾಲಿ ಕೂಗಿಕೊಂಡಿದ್ದಾಳೆ. ಕೊಲೆಯಾಗಿ ಸುಮಾರು ಅರ್ಧ ಗಂಟೆ ಬಳಿಕ ಆಕೆ ಕೂಗಿದ್ದೇಕೆ ಎಂಬುದರ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಎಸ್ಪಿ ನಾರಾಯಣ ಎಂ(SP NARAYAN M) ಅವರು ಪ್ರಕರಣ ಭೇದಿಸಲು ವಿಶೇಷ ತಂಡ ಮಾಡಿದರು. ಹಣಕೋಣ ಗ್ರಾಮದಿಂದ ಗೋವಾ ಗಡಿವರೆಗಿನ ಎಲ್ಲಾ ಸಿಸಿಟಿವಿ ಪರಿಶೀಲಿಸಲು ಸೂಚಿಸಿದರು.  ಹಣಕೋಣ, ಅಸ್ನೋಟಿ,  ಮಾಜಾಳಿ ಚೆಕ್ ಪೊಸ್ಟ್ (MAJALI CHECKPOST)  ಸ್ವಿಫ್ಟ್ ಕಾರು ನೋಂದಣಿ ಮತ್ತು ಯಾವ ಸಮಯಕ್ಕೆ ಗೋವಾ ಪ್ರವೇಶಿಸಿದೆ ಎಂದು ಮಾಹಿತಿ ಕಲೆ ಹಾಕಿದರು.

ಕಾರು ಗೋವಾ(GOA) ಲೋಲೆಂನ ಓರ್ವ ವ್ಯಕ್ತಿಯದಾಗಿತ್ತು, ಅವರು ಅದನ್ನು ಹಳಗಾದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದರು ಎಂಬುದು ಮಾಹಿತಿ ಲಭ್ಯವಾಗಿದೆ. ಕಾರು ಮಾರಾಟದ ಬಗ್ಗೆ ವಿಚಾರಿಸಿದಾಗ ಈ ಸಂದರ್ಭದಲ್ಲಿ ಒಬ್ಬರನ್ನ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇನ್ನೂ ಇನ್ನೂ ಮೂರ್ನಾಲ್ಕು ಜನರನ್ನ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರೆನ್ನಲಾಗುತ್ತಿದೆ. ಆದರೆ ಅವರೆಲ್ಲ ಕೃತ್ಯ ನಡೆಸಿದಾತನ ಕಂಪನಿಯಲ್ಲಿ ಕೆಲಸ ಮಾಡುವ ಅನ್ಯ ರಾಜ್ಯದ ಕಾರ್ಮಿಕರೆಂದು ಹೇಳಲಾಗಿದೆ.

ಇದು ಯಾವುದೇ ಅವಿದ್ಯಾವಂತರು ಮಾಡಿದ ಕೃತ್ಯವಲ್ಲ. ಸುಸಂಸ್ಕೃತ ಕುಟುಂಬದವರೆ ಮಾಡಿದ ಕೃತ್ಯ. ವಿನಾಯಕ್ ಮತ್ತು ಕೃತ್ಯ ಮಾಡಿಸಿದಾತ ಇಬ್ಬರು ಪೂನಾದಲ್ಲಿ ನೆಲೆ ಕಂಡುಕೊಂಡವರು. ಇಬ್ಬರು ಅಗರ್ಭ ಶ್ರೀಮಂತರೆ. ಆದರೆ ತಮ್ಮ ಕುಟುಂಬವನ್ನ ಸರಿಯಾಗಿ ಇಟ್ಟುಕೊಳ್ಳದವರು. ವಿನಾಯಕ್ ನಾಯ್ಕ ಮದುವೆಗೆ ಮುಂಚೆ ಇರುವ ಸಂಬಂಧವೆ ಅವರ ಜೀವಕ್ಕೆ ಮುಳುವಾಗಿರೋದಾಗಿ ಜನ ಆಡಿಕೊಳ್ಳುತ್ತಿದ್ದಾರೆ. ಕಾರವಾರ ಪೊಲೀಸರು ಇನ್ನೂ ಕೆಲ ದಿನಗಳಲ್ಲಿ ಪ್ರಕರಣಕ್ಕೆ ಪುಲ್ ಸ್ಟಾಪ್ ಇಡುವ ಸಾಧ್ಯತೆ ಇದೆ.

ಭಾನುವಾರ ಬೆಳಿಗ್ಗೆ ಹಣಕೋಣದ ತನ್ನ ಮನೆಯಿಂದ ಪೂನಾಗೆ ಹೊರಡಲು ಸಿದ್ದರಾಗಿದ್ದ ಉದ್ಯಮಿ ವಿನಾಯಕ್ ನಾಯ್ಕ ಅವರನ್ನ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಶನಿವಾರ ತಾಯಿಯ ಶ್ರಾದ್ದಕ್ಕೆ ಅವರ ಮನೆಗೆ ಬಂದವರ್ಯಾರು. ಅವರು ಬೆಳಿಗ್ಗೆ ಹೋಗುವ ಮಾಹಿತಿಯನ್ನ ಕೊಲೆಗಡುಕರಿಗೆ ನೀಡಿದವರ್ಯಾರು? ವಿನಾಯಕನ ಆತ್ಮೀಯರೇ ನೀಡಿದ್ದಾರಾ ಎಂಬುದರ ತನಿಖೆಯನ್ನ ಪೊಲೀಸರು ಮಾಡುತ್ತಿದ್ದಾರೆ. ಶೀಘ್ರದಲ್ಲಿ ಪೊಲೀಸರು ಪ್ರಕರಣ ಭೇದಿಸಲಿದ್ದಾರೆ.

ಇದನ್ನು ಓದಿ : ಕಾರವಾರದಲ್ಲಿ ಅಗರ್ಭ ಶ್ರೀಮಂತನ ಹತ್ಯೆ

ಶಿರೂರಿಗೆ ಮೇಜರ್ ಜನರಲ್ ಇಂದ್ರಬಾಲನ್ ಭೇಟಿ

ಗೋಕರ್ಣ ಪೊಲೀಸರಿಂದ ಅಂತಾರಾಜ್ಯ ವ್ಯಕ್ತಿ ಬಂಧನ