ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಬೈಂದೂರು(Bynduru) : ನಿಯಂತ್ರಣ ತಪ್ಪಿದ ಬೈಕೊಂದು ಅಫಘಾತಕ್ಕೀಡಾಗಿ ಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ(NH 66) ಸಂಭವಿಸಿದೆ.

ಬೈಂದೂರು(Bynduru) ತಾಲೂಕಿನ  ವತ್ತಿನೆಣೆ ಬಳಿ ಈ ಘಟನೆ  ನಡೆದಿದೆ. ಉಮೇಶ ಮಂಜುನಾಥ ಮೊಗೇರ (43) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿಯ ಪತ್ನಿ ಪದ್ಮಾ ಮೊಗೇರ ಕೂಡ ಅಪಘಾತದಲ್ಲಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಮೇಶ ರಾತ್ರಿ ಮೀನುಗಾರಿಕೆ ನಡೆಸಿ ಇಂದು ಬೆಳಿಗ್ಗೆ ತ ನ್ನ ಪತ್ನಿಯನ್ನು ಕುಂದಾಪುರ(Kundapur) ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿ ಬಳಿಕ ಭಟ್ಕಳದ ಮನೆಗೆ ತೆರೆಳುತ್ತಿರುವಾಗ ಈ ಘಟನೆ ನಡೆದಿದೆ.

ಬೈಂದೂರು(Bynduru) ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗಿದೆ.