ಜೋಯಿಡಾ : ಮನೆಯಲ್ಲಿ ಸಮೀಪದಲ್ಲಿರುವ ಕಾಡಿನಲ್ಲಿ ಎಮ್ಮೆ ಮೇಯಿಸಲು ಹೋಗಿದ್ದ ವ್ಯಕ್ತಿಯೋರ್ವನ ಮೇಲೆ ಕರಡಿಯೊಂದು ದಾಳಿ ಮಾಡಿದ ಘಟನೆ  ತಾಲೂಕಿನ ಬಿರಂಪಾಲಿ ಗೌಳಿವಾಡದಲ್ಲಿ ನಡೆದಿದೆ.

ಬಿರಂಪಾಲಿ ಗೌಳಿವಾಡದ ನಿವಾಸಿ ಬಾಳು ಕಾನು ಶೆಳಕೆ ಎಂಬಾತನೆ ಕರಡಿ ದಾಳಿಗೊಳಗಾಗಿ ಗಂಭೀರ ಗಾಯಗೊಂಡಿದ್ದಾನೆ.  ಭಾನುವಾರ ಸಂಜೆ ಬಾಳು ತಮ್ಮ ಎಮ್ಮೆಗಳನ್ನು ಮೇಯಿಸುತ್ತಿರುವ ಸಂದರ್ಭದಲ್ಲಿ ಏಕಾಏಕಿಯಾಗಿ ಕರಡಿ ಪ್ರತ್ಯಕ್ಷವಾಯಿತು. ನೋಡ ನೋಡುತ್ತಿದ್ದಂತೆ ದಾಳಿ ಮಾಡಿತು.  ಹೀಗೂ ಜೀವದ ಹಂಗು ತೊರೆದು ಕೆಲ ಕ್ಷಣಗಳ ಕಾಲ ಕಾದಾಡಬೇಕಾಯಿತು. ಅಂತೂ ಗಂಭೀರ ಗಾಯಗೊಂಡು ಕರಡಿ ದಾಳಿಯಿಂದ ತಪ್ಪಿಸಿಕೊಂಡು ಓಡಿ ಬಂದಿದ್ದಾನೆ.

ಗಂಭೀರ ಗಾಯಗೊಂಡಾತನನ್ನ ತಕ್ಷಣವೇ ದಾಂಡೇಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಧಾರವಾಡದ ಸಿವಿಲ್ ಆಸ್ಪತ್ರೆಗೆ ಕಳಿಸಲಾಗಿದೆ. ಸ್ಥಳಕ್ಕೆ ವಿರ್ನೋಲಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.