ಕಾರವಾರ(KARWAR) : ನಗರದ ಕುರ್ಸವಾಡದಲ್ಲಿ ನವಜಾತ ಶಿಶುವನ್ನು(BORN BABY) ಬಿಟ್ಟು ಪಾಪಿಗಳು ಪರಾರಿಯಾಗಿದ್ದಾರೆ.
ರಾತ್ರಿಯೇ ಜನಿಸಿದ ಹೆಣ್ಣು ಶಿಶು(BABY GIRL)ವಾಗಿದೆ. ಕುರ್ಸವಾಡದ ಮುಳ್ಳಿನ ಪೊದೆಯಲ್ಲಿ ಮಗು ಅಳುವ ಶಬ್ದ ಕೇಳಿದ ಸ್ಥಳೀಯರು ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ.
ನಗರ ಠಾಣೆ (TOWN STATION) ಮತ್ತು ಮಹಿಳಾ ಪೊಲೀಸರು ಸ್ಥಳಕ್ಕೆ ಧಾವಿಸಿ ಮಗುವನ್ನ ರಕ್ಷಿಸಿದ್ದಾರೆ. ಬಳಿಕ ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಗುವನ್ನ ಐಸಿಯುವಿ(ICU)ನಲ್ಲಿ ಇಡಲಾಗಿದ್ದು ವೈದ್ಯರು ನಿಗಾ ವಹಿಸಿದ್ದಾರೆ. ಮಗುವಿನ ತಾಯಿಯ ಹುಡುಕಾಟವನ್ನು ಪೊಲೀಸರು ನಡೆಸಿದ್ದಾರೆ. ಕಾರವಾರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಚಿನ್ನದ ಹುಡುಗಿಗೆ ಚಿನ್ನದಂಥ ಸ್ವಾಗತ