ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಭಟ್ಕಳ(Bhatkal) : ಇಂದು ಮೊಬೈಲ್(Mobile), ಇಂಟರ್​​ನೆಟ್(Internet), ನೆಟ್​ವರ್ಕ್ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಆಫರ್ ಗಳ ಆಸೆ ತೋರಿಸಿ, ಜಿಯೋ ಮತ್ತು ಏರ್ಟೆಲ್(Jio and Airtel)  ದೋಖಾ ಮಾಡುತ್ತಿದ್ದಾರೆ.

ಉತ್ತರಕನ್ನಡ(Uttarkannada) ಜಿಲ್ಲೆಯ ಭಟ್ಕಳ(Bhatkal) ತಾಲ್ಲೂಕಿನ ಮುಂಡಳ್ಳಿ  ಗ್ರಾಮದಲ್ಲಿ(Mundalli Village) ಕಳೆದ ಕೆಲ ತಿಂಗಳಿಂದ ಜಿಯೋ ಮತ್ತು ಏರ್ಟೆಲ್ (Jio and Airtel) ಕಂಪನಿ‌ ಅನ್ಯಾಯ ಮಾಡುತ್ತಿದೆ. ಗ್ರಾಮದಲ್ಲಿ ನೆಟ್ವರ್ಕ್ ಸರಿಯಾಗಿ ಬರುತ್ತಿಲ್ಲ. ಇದರಿಂದ ಗ್ರಾಹಕರು‌ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.

ಗ್ರಾಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿದ್ದಾರೆ, ಸರ್ಕಾರಿ ನೌಕರರಿದ್ದಾರೆ. ಮೊಬೈಲ್ ಸಂಖ್ಯೆಗೆ ಬಂದ ಮಾಹಿತಿಯನ್ನ ಸರಿಯಾಗಿ ನೋಡಲು ಸಾಧ್ಯವಾಗುತ್ತಿಲ್ಲ.

ತಾಲೂಕಿನ ಬಂದರು ಭಾಗದಲ್ಲಿ ದಶಕಗಳ ಹಿಂದೆ ಟವರ್ ಅಳವಡಿಸಲಾಗಿತ್ತು. ಆದರೆ  ಸರಿಯಾಗಿ ಕಾರ್ಯನಿರ್ವಹಿಸದ ಕಾರಣಕ್ಕೆ ಈ ಭಾಗದಲ್ಲಿ‌ ಕೆಲ ತಿಂಗಳಿನಿಂದ ನೆಟ್​​ವರ್ಕ್ ತುಂಬಾ ಸೊರಗಿದೆ. ಹೀಗಾಗಿ ಗ್ರಾಹಕರು  ಪರದಾಡುವಂತಾಗಿದೆ.

ಈ ಬಗ್ಗೆ ಜಿಯೋ ಮತ್ತು ಏರ್ಟೆಲ್ (Jio and Airtel) ಕಂಪನಿಯವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ನೆಟ್​ವರ್ಕ್​ ಸೌಲಭ್ಯಕ್ಕಾಗಿ ಹುಡುಕಾಡಬೇಕಾದ ಅನಿವಾರ್ಯತೆಯಲ್ಲಿ ಇಲ್ಲಿನವರು ಸಿಲುಕಿದ್ದಾರೆ. ನೆಟ್​​ವರ್ಕ್ ಇಲ್ಲದೇ ಮೊಬೈಲ್ ಬಳಕೆದಾರರಷ್ಟೆ ಅಲ್ಲದೇ, ವಿದ್ಯಾರ್ಥಿಗಳೂ ಪರದಾಡುತ್ತಿಬಿಎಸ್ಎನ್ಎ ಲ್

ಇಲ್ಲಿ ಬಿಎಸ್ಎನ್ಎಲ್ (BSNL) ಅಷ್ಬಕ್ಕಷ್ಟೆ. ಹೀಗಾಗಿ ನಾಗರಿಕರು ಜಿಯೋ ಮತ್ತು ಏರ್ಟೆಲ್ (Jio and Airtel) ಮೊರೆ ಹೋಗಿದ್ದರು. ಆದರೆ ನೆಟ್ವರ್ಕ್ ಸರಿಯಾಗಿ ಇಲ್ಲದಿರುವುದರಿಂದ ಪುನಃ ಬಿಎಸ್ಎನ್ಎಲ್ (BSNL) ಗೆ ಪೋರ್ಟ್ ಮಾಡಿಕೊಳ್ಳುವ ಚಿಂತನೆಯಲ್ಲಿದ್ದಾರೆ.

ಬಳಕೆದಾರರು ತಮಗೆ ಸಮರ್ಪಕವಾದ ನೆಟ್ವರ್ಕ್​ ಸೌಲಭ್ಯ ನೀಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತಿರುವ ಜನರು  ನಮ್ಮ‌ಪಾಲಿಗೆ ಸತ್ತಂತಾಗಿರುವ ಜಿಯೋ ಮತ್ತು ಏರ್ಟೆಲ್ (Jio and Airtel) ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಪರಿಸ್ಥಿತಿ ಹೀಗೆ ಮುಂದುವರಿದರೇ ಮುಂಡಳ್ಳಿ ನಾಗರಿಕರು ಜಿಯೋ ಮತ್ತು ಏರ್ಟೆಲ್ (Jio and Airtel) ಗೆ ಶ್ರದ್ಧಾಂಜಲಿ ಸಲ್ಲಿಸುವ ಸಂದರ್ಭ ದೂರವಿಲ್ಲವಾಗಿದೆ.  ಹಾಳಾದ ನೆಟ್ವರ್ಕ್ ಬಹಳ ವರ್ಷಗಳಿಂದ ಸರಿಯಾಗಿಲ್ಲ. ಸಾವಿರಾರು ರೂ ಖರ್ಚು ಮಾಡಿ ಮೊಬೈಲ್ ಖರೀದಿಸುತ್ತೇವೆ.  ಒಮ್ಮೆಲೆ ಸಾವಿರಾರು ರೂ. ರಿಚಾರ್ಜ್ ಮಾಡಿಸುತ್ತೇವೆ. ಆದರೆ ಜಿಯೋ ಮತ್ತು ಏರ್ಟೆಲ್ (Jio and Airtel)  ಕಂಪನಿಯ ನೆಟ್ ವರ್ಕ್ ಬಾರದೇ ತೊಂದರೆಯಾಗುತ್ತಿದೆ ಎಂದು ಭಾಸ್ಕರ್ ನಾಯ್ಕ ಪಾವಣಿಹಿತ್ಲು  ಹೇಳಿದ್ದಾರೆ.