ಭಟ್ಕಳ(Bhatkal) : ವಿದ್ಯಾರ್ಥಿಗಳನ್ನ ಒಯ್ಯುತ್ತಿದ್ದ ಶಾಲಾ ವಾಹನಕ್ಕೆ ಬೆಂಕಿ (School Van Fire) ಹೊತ್ತಿಕೊಂಡ ಘಟನೆ ತಾಲೂಕಿನ ವೆಂಕಟಾಪುರ ಬಳಿ ನಡೆದಿದೆ.
ಸೋಮವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಘಟನೆ ನಡೆದಿದೆ. ವಾಹನ ಭಟ್ಕಳದಿಂದ ಶಿರಾಲಿ(Bhatkal to Shirali) ಕಡೆ ತೆರಳುತಿತ್ತು. ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ವಾಹನದಲ್ಲಿ ಇಬ್ಬರು ವಿದ್ಯಾರ್ಥಿಗಳಿದ್ದರೆಂದು ತಿಳಿದುಬಂದಿದೆ. ಭಟ್ಕಳ ತಾಲೂಕಿನ ಹೆಬಳೆಯಲ್ಲಿರುವ ನ್ಯೂ ಶಮ್ಸ್ ಶಾಲೆಯ(New Shams School) ವಾಹನ ಇದಾಗಿದ್ದು, ವಾಹನದಲ್ಲಿದ್ದವರು ಅದೃಷ್ಟವಶಾತ್ ಬಚಾವ್ ಆಗಿದ್ದಾರೆ.
ಶಾಲಾ ವಾಹನಕ್ಕೆ ಬೆಂಕಿ ಬಿದ್ದ ಸುದ್ದಿ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ವಾಹನದೊಳಗೆ ಶಾರ್ಟ್ ಉಂಟಾಗಿದ್ದರಿಂದ ಬೆಂಕಿ ಹೊತ್ತಿಕೊಂಡಿರಬಹುದೆಂದು ಶಂಕಿಸಲಾಗಿದೆ. ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು(Bhatkal Rural Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನು ಓದಿ : ಜೋಗ ಫಾಲ್ಸ್ ಗೆ ಪ್ರವೇಶ ನಿರ್ಬಂಧ. ಪ್ರವಾಸಿಗರೇ ಸಹಕರಿಸಿ.
ಪ್ರಸಿದ್ದ ತಬಲಾ ವಾದಕ ಜಾಕಿರ್ ಹುಸೇನ್ ನಿಧನ
ಮುರ್ಡೇಶ್ವರ ಘಟನೆ. ಭಟ್ಕಳ ಮೂಲದ ಹೈಕೋರ್ಟ್ ಹಿರಿಯ ನ್ಯಾಯವಾದಿಯಿಂದ ದೂರು.