ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಅಂಕೋಲಾ(Ankola) : ತಾಲೂಕಿನ ತೆಂಕಣಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ(GHPS) ಬುಧವಾರ ಮಧ್ಯರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ(Fire) ಶಾಲೆಯ ಎರಡು ಕೊಠಡಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಘಟನೆಯಲ್ಲಿ‌ ಅಂದಾಜು 50 ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

​ಮಧ್ಯರಾತ್ರಿ ನಡೆದ ದುರಂತ: ದಸರಾ ರಜೆ(Dussera Holiday) ಮುಗಿದು ಗುರುವಾರ ಬೆಳಿಗ್ಗೆಯಿಂದಲೇ ಶಾಲೆಗಳು ಪುನರಾರಂಭಗೊಳ್ಳಬೇಕಿದ್ದವು. ಆದರೆ, ಬುಧವಾರ ಮಧ್ಯರಾತ್ರಿ ಸುಮಾರು 1:30ರ ಸುಮಾರಿಗೆ ಶಾಲೆಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಒಂದು ಕೊಠಡಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದರೆ, ಮತ್ತೊಂದು ಕೊಠಡಿಗೆ ಭಾಗಶಃ ಹಾನಿಯಾಗಿದೆ.

​ಸುಟ್ಟುಹೋದ ಬೆಲೆಬಾಳುವ ವಸ್ತುಗಳು:

ಅಪಘಾತದ ತೀವ್ರತೆಗೆ ಕೊಠಡಿಯಲ್ಲಿದ್ದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಸ್ಮಾರ್ಟ್ ಟಿವಿ(Smart Tv) ಬೆಂಕಿಗಾಹುತಿಯಾಗಿದೆ. ಇದರೊಂದಿಗೆ ಮಕ್ಕಳ ಆಟದ ಸಾಮಗ್ರಿಗಳು, ವ್ಯಾಯಾಮ ಸಲಕರಣೆಗಳು, ಬ್ಯಾಂಡ್‌ಸೆಟ್, ಪುಸ್ತಕಗಳು ಹಾಗೂ ಪಂಪ್‌ಸೆಟ್ ಸೇರಿದಂತೆ ಹಲವು ಅಗತ್ಯ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.

​ಸ್ಥಳಕ್ಕೆ ಅಧಿಕಾರಿಗಳ ಭೇಟಿ:

ಮಧ್ಯರಾತ್ರಿ ಸಂಭವಿಸಿದ ಈ ಅಗ್ನಿ ಅವಘಡದ ಸುದ್ದಿ ತಿಳಿದ ಕೂಡಲೇ ಸಾರ್ವಜನಿಕರು ಹಾಗೂ ಅಗ್ನಿಶಾಮಕ ದಳದವರು(Fire Brigade) ಸ್ಥಳಕ್ಕೆ ಧಾವಿಸಿ ಹಪಹಪಿ ನಡೆಸಿ, ಸತತ ಪ್ರಯತ್ನದ ಬಳಿಕ ಬೆಂಕಿಯನ್ನು ಹತೋಟಿಗೆ ತಂದರು.

​ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ತಾ.ಪಂ. ಅಧಿಕಾರಿ ರಾಮು ಅಗ್ನಿ ಹಾಗೂ ಸ್ಥಳೀಯ ಮುಖಂಡರು ಸೇರಿದಂತೆ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ, ಹಾನಿಯ ವೀಕ್ಷಣೆ ನಡೆಸಿ ಪರಿಶೀಲನೆ ನಡೆಸಿದ್ದಾರೆ. ದಸರಾ ರಜೆ ಮುಗಿದು ಮಕ್ಕಳು ಶಾಲೆಗೆ ಮರಳುವ ದಿನವೇ ಈ ಅನಾಹುತ ಸಂಭವಿಸಿರುವುದು ಪೋಷಕರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.